ಅನುದಾನ ಕೊರತೆ:ಮೂಲ ಸೌಕರ್ಯ ಕಲ್ಪಿಸುವಲ್ಲಿಸ್ಥಳೀಯ ಸಂಸ್ಥೆಗಳು ವಿಫಲ
ಬೆಂಗಳೂರು, ಆ.24: ಸಿಲಿಕಾನ್ ಸಿಟಿ, ಉದ್ಯಾನನಗರಿ, ಮೆಟ್ರೋಪಾಲಿಟನ್ ಸಿಟಿ ಎಂಬ ಬಿರುದುಗಳನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದುವುದರಲ್ಲಿ ಅತ್ಯಂತ ಹಿಂದುಳಿದೆ ಎಂದು ನಾಲ್ಕನೆ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಗದಿಂದ ಏರ್ಪಡಿಸಿದ್ದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳೊಂದಿಗೆ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಅಭಿವೃದ್ಧಿ, ಚರಂಡಿ, ಬೀದಿದೀಪ ವ್ಯವಸ್ಥೆ, ತೆರಿಗೆ ಸಂಗ್ರಹಣೆ, ಚುನಾಯಿತ ಪ್ರತಿನಿಗಳಿಗೆ ತರಬೇತಿ, ಮಾನವ ಸಂಪನ್ಮೂಲ ಹಾಗೂ ತಾಂತ್ರಿಕ ಸಿಬ್ಬಂದಿ ಕೊರತೆ ವಿಷಯಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಗಳು ಪ್ರಶ್ನಾವಳಿಯನ್ನು ಭರ್ತಿ ಮಾಡುವ ಮೂಲಕ ತಿಳಿಸಿದರೆ, ಆಯೋಗದ ಶಿಾರಸಿನಲ್ಲಿ ಸೇರಿಸಲಾಗುವುದು ಎಂದರು.ವರೆಗೆ ಅಕಾರ ನಡೆಸಿದ ಎಲ್ಲ ಸರಕಾರಗಳು ಗ್ರಾಮೀಣಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಇದಕ್ಕೆ ಆಡಳಿತದ ವೈಲ್ಯವೋ, ಜನಪ್ರತಿನಿಗಳ ನಿರ್ಲಕ್ಷ್ಯವೋ ಅಥವಾ ಜನರ ಸಹಭಾಗಿತ್ವದ ಕೊರತೆಯ ಕಾರಣವೋ, ಒಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎಲ್ಲೆಡೆ ಕಾಡುತ್ತಿದೆ ಎಂದರು.್ರಾಮ, ತಾಲೂಕು, ಜಿಪಂಗಳು ಆದಾಯ ಹಾಗೂ ವೆಚ್ಚಕ್ಕೆ ಅನುಗುಣವಾಗಿ ಆದ್ಯತೆ ಮೇರೆಗೆ ಜನರ ಆವಶ್ಯಕತೆಗಳನ್ನು ಪೂರೈಸಬೇಕೆಂದು ತಿಳಿಸಿದರಲ್ಲದೆ, ಅಕಾರಿಗಳು ಹಾಗೂ ಚುನಾಯಿತ ಪ್ರತಿನಿಗಳು ಸಮರ್ಥವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ, ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಯಲ್ಲಿ ಯಶಸ್ಸು ಕಾಣಲು ಸಾಧ್ಯವೆಂದರು.ಯೋಗದ ಸದಸ್ಯ ಎಚ್.ಡಿ.ಅಮರನಾಥ್ ಮಾತನಾಡಿ, ಜನಪ್ರತಿನಿಗಳು, ಅಕಾರಿಗಳು ಅನುದಾನವನ್ನು ಬಳಸಿಕೊಂಡು ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿದರೆ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದರು.್ರಾಮ ಹಾಗೂ ತಾಪಂ ಅಧ್ಯಕ್ಷರು ಮಾತನಾಡಿ, ಬೆಂಗಳೂರು ನಗರ ಜಿಲ್ಲೆಯ ಹಲವಾರು ಗ್ರಾಮ ಪಂಚಾಯತ್‌ಗಳು, ಬಿಬಿಎಂಪಿಗೆ ಹೊಂದಿಕೊಂಡಿದ್ದು, ಸ್ಥಳೀಯ ಪ್ರಾಕಾರಿಗಳು ನಮ್ಮ ವ್ಯಾಪ್ತಿಗೆ ಬರುವ ತೆರಿಗೆಗಳನ್ನು ಸಂಗ್ರಹಿಸುತ್ತಿವೆ. ಇದರಿಂದಾಗಿ ಪಂಚಾಯತ್‌ಗಳು ಆರ್ಥಿಕ ತೊಂದರೆ ಅನುಭಸುತ್ತಿವೆ.ತೆರಿಗೆಗಳು ಪಂಚಾಯತ್ ವ್ಯಾಪ್ತಿಗೆ ಬರುವಂತೆ 4ನೆ ಹಣಕಾಸು ಆಯೋಗದ ಶಿಾರಸಿನಲ್ಲಿ ಸೇರಿಸಿ ಸಮಸ್ಯೆ ನಿವಾರಿಸಬೇಕು. ಕೈಗಾರೀಕರಣ, ನಗರೀಕರಣದಿಂದಾಗಿ ಹದಗೆಟ್ಟ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ, ಜನಸಂಖ್ಯಾ ಹೆಚ್ಚಳ ಇನ್ನಿತರೆ ಸಮಸ್ಯೆಗಳು ಕಂಡು ಬರುತ್ತಿವೆ. ಈ ಸಮಸ್ಯೆಗಳನ್ನು ನಿಭಾಯಿಸಲು ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಆಯೋಗದ ಸಮಾಲೋಚಕ ಎಸ್.ಆರ್.ವಾರಂಬಳ್ಳಿ, ಸಿಇಒ ಎನ್. ಮಂಜು, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ, ಲೆಕ್ಕಾಕಾರಿ, ಉಪ ಕಾರ್ಯದರ್ಶಿ , ಗ್ರಾಪಂ ಹಾಗೂ ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯ ನಿರ್ವಹಣಾಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.





