ರಾಜ್ಯೋತ್ಸವ ಪ್ರಶಸ್ತಿ: ಸಲಹೆ ಆಹ್ವಾನ
ಮಂಗಳೂರು, ಆ.24: ರಾಜ್ಯ ಸರಕಾರವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಮಾನದಂಡ/ಮಾರ್ಗಸೂಚಿಯನ್ನು ರೂಪಿಸಲು ಹೈಕೋರ್ಟ್ ನ್ಯಾಯಾೀಶ ನಾಗಮೋಹನ್‌ದಾಸ್‌ರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ.
ಈ ಸಮಿತಿಯು ಸಾರ್ವಜನಿಕರಿಂದ ರಾಜ್ಯ ಪ್ರಶಸ್ತಿಯನ್ನು ಆಯ್ಕೆ ಮಾಡುವ ಸಂಬಂಧ ಸಲಹೆ/ಅಭಿಪ್ರಾಯಗಳನ್ನು ಪಡೆಯಲಿದೆ. ಸಲಹೆಗಳನ್ನು ಆ.28ರೊಳಗೆ ಇಲಾಖೆಯ ಇ-ಮೇಲ್ ವಿಳಾಸ kanbhavblr@gmail.com, mailto:kanbhavblr@gmail.com ಗೆ ಅಥವಾ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2 ಈ ವಿಳಾಸಕ್ಕೆ ನೀಡಬಹುದು. ಕೇವಲ ರಾಜ್ಯ ಪ್ರಶಸ್ತಿ ಆಯ್ಕೆಗೆ ಮಾರ್ಗಸೂಚಿ /ಮಾನದಂಡ ರೂಪಿಸುವ ಸಂಬಂಧ ಮಾತ್ರ ಸಲಹೆ ಸೂಚನೆಗಳನ್ನು ನೀಡಬೇಕು. ರಾಜ್ಯ ಪ್ರಶಸ್ತಿಗಾಗಿ ಯಾರ ಹೆಸರನ್ನೂ ಸೂಚಿಸುವಂತಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story





