ಅರ್ಜುನ ಪ್ರಶಸ್ತಿಯ ನಿರೀಕ್ಷೆಯಲ್ಲಿ ಜೈಶಾ

ಲೂಧಿಯಾನ , ಆ.24: ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳನ್ನು ಕಡೆಗಣಿಸಿದ್ದ ಭಾರತದ ಕ್ರೀಡಾ ಅಧಿಕಾರಿಗಳ ವಿರುದ್ಧ ಹರಿಹಾಯ್ದು ವಿವಾದವನ್ನುಂಟು ಮಾಡಿದ್ದ ಮ್ಯಾರಥಾನ್ ಓಟಗಾರ್ತಿ ಒ.ಪಿ.ಜೈಶಾ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಏಶ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಜೈಶಾ 31ರ ಹರೆಯದ ಜೈಶಾ ಅವರು ಎರಡು ಬಾರಿ ಏಶ್ಯನ್ ಇಂಡೋರ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ನಾಲ್ಕು ಬಾರಿ ಅವರನ್ನು ಅರ್ಜುಜನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದ್ದರೂ, ಪ್ರಶಸ್ತಿಗೆ ಕಡೆಗಣಿಸಲಾಗಿತ್ತು.
ಕೇರಳದ ಮೂಲದ ಜೈಶಾ ಅವರು ಲೂಧಿಯಾನದ ಅಥ್ಲೀಟ್ ಗುರ್ಮೀಟ್ ಸಿಂಗ್ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ 42 ಕಿ.ಮೀ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಜೈಶಾ ಅವರು ಟ್ರಾಕ್‌ನ ಫಿನಿಶಿಂಗ್ ಲೈನ್ ಬಳಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದರು .
ಬ್ರೆಝಿಲ್‌ನಿಂದ ತವರಿಗೆ ವಾಪಸಾಗುತ್ತಲೇ ಹೇಳಿಕೆ ನೀಡಿದ್ದ ಜೈಶಾ ಎಲ್ಲಾ ದೇಶಗಳ ಅಥ್ಲೀಟ್‌ಗಳಿಗೂ ಆಯಾ ದೇಶಗಳ ಸಮಿತಿಯು ಪ್ರತಿ 2.5 ಕಿ.ಮಿ. ದಾರಿಯಲ್ಲಿ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಿತ್ತು. ಆದರೆ ಭಾರತದ ವತಿಯಿಂದ ಅಂತಹ ವ್ಯವಸ್ಥೆ ಇರಲಲ್ಲ ಎಂದು ಜೈಶಾ ಅವರು ದೂರಿದ್ದರು.
ರಿಯೋ ಒಲಿಂಪಿಕ್ಸ್ ಮ್ಯಾರಥಾನ್ ಓಟದ ಸಮಯದಲ್ಲಿ ಕುಡಿಯಲು ನೀರು ಕೊಡಲು ಭಾರತದ ಯಾರೂ ಇರಲಿಲ್ಲ.ತನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು ಎಂದು ಜೈಶಾ ಆರೋಪ ಮಾಡಿದ್ದರು.
ಜೈಶಾ ಆರೋಪಕ್ಕೆ ಸಂಬಂಧಿಸಿ ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಓಂಕಾರ್ ಕೆಡಿಯಾ ಮತ್ತು ಕ್ರೀಡಾ ನಿರ್ದೇಶಕ ವಿವೇಕ್ ನಾರಾಯಣ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಸಮಿತಿಯನ್ನು ಯುವಜನ ಮತ್ತು ಕ್ರೀಡಾ ಸಚಿವ ವಿಜಯ್ ಗೋಯಲ್ ನೇಮಕ ಮಾಡಿದ್ದರು. ಏಳು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ದ್ವಿಸದಸ್ಯರ ಸಮಿತಿಗೆ ಕ್ರೀಡಾ ಸಚಿವರು ಆದೇಶ ನೀಡಿದ್ದಾರೆ. ‘‘ ಒಲಿಂಪಿಕ್ಸ್ ಭಾಗವಹಿಸಿದವರನ್ನು ದೇವರೇ ಕಾಪಾಡಬೇಕಾಗಿದೆ. ಅಥ್ಲೀಟ್‌ಗಳ ಬಗ್ಗೆ ಅಧಿಕಾರಿಗಳಿಗೆ ಯಾಕೆ ಅಷ್ಟು ತಾತ್ಸಾರ ? ಸ್ಪರ್ಧೆಯ ಮುನ್ನಾದಿನ ಜೈಶಾ ದೂರವಾಣಿಯಲ್ಲಿ ಸಂಪರ್ಕಿಸಿ ತಾನು ಸ್ಪರ್ಧೆಗೆ ತಯಾರಾಗಿರುವೆ. ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಆದರೆ ಅಧಿಕಾರಿಗಳು ಕಡೆಗಣಿಸಿದ ಹಿನ್ನೆಲೆಯಲ್ಲಿ ಆಕೆ ಸಾಯುವ ಹಂತಕ್ಕೆ ತಲುಪುವಂತಾಗಿತ್ತು’’ ಎಂದು ಜೈಶಾ ಪತಿ ಗುರ್ಮಿಟ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಜೈಶಾ ಅವರು ಆಂಗ್ಲ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿ ತಾನು ಕೊನೆಯ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಮುಂದೆ ಭಾಗವಹಿಸಲು ಅವಕಾಶ ಸಿಗಬಹುದೆಂದು ಹೇಳಲು ಸಾಧ್ಯವಿಲ್ಲ. ನಿವೃತ್ತಿಯ ಬಗ್ಗೆ ಆಲೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ ಆಕೆಯ ಪತಿ ಗುರ್ಮಿಟ್ ಸಿಂಗ್ ಅವರು ಜೈಶಾ ನಿವೃತ್ತಿಯ ವಿಚಾರವನ್ನು ಅಲ್ಲಗಳೆದಿದ್ದಾರೆ. ಆಕೆ ಪ್ರಶಸ್ತಿ ಸಿಗುವ ತನಕ ನಿವೃತ್ತಿಯಾಗುವುದಿಲ್ಲ. ಮ್ಯಾರಥಾನ್‌ನಿಂದ ದೂರ ಸರಿದರೂ ಅವರು 1,500 ಮೀಟರ್ ಓಟದಲ್ಲಿ ಮುಂದುವರಿಯಲಿದ್ದಾರೆ ’’ಎಂದು ಹೇಳಿದ್ದಾರೆ.
‘‘ ಜೈಶಾ ಆನೇಕ ಸಾಧನೆ ಮಾಡಿದ್ದರೂ, ಅರ್ಜುನ ಪ್ರಶಸ್ತಿಗೆ ಆಕೆಯನ್ನು ಕಡಿಗಣಿಸಲಾಗಿದೆ. ಅದಕ್ಕಾಗಿ ಆಕೆ ಹೋರಾಟ ನಡೆಸಬೇಕಾಗಿದೆ ’’ ಎಂದು ಗುರ್ಮಿಟ್ ಸಿಂಗ್ ಹೇಳಿದ್ದಾರೆ. ಜೈಶಾ ರಿಯೋ ಒಲಿಂಪಿಕ್ಸ್‌ನಲ್ಲಿ ಆಗಿರುವ ಆಘಾತದಿಂದ ಚೇತರಿಸಿಕೊಂಡ ಬಳಿಕ ಬೆಂಗಳೂರಿನಲ್ಲಿರುವ ಭಾರತದ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಶೀಘ್ರದಲ್ಲೇ ತರಬೇತಿ ಕೇಂದ್ರದಲ್ಲಿ ಮುಂದಿನ ಸ್ಪರ್ಧೆಗೆ ತಯಾರಿ ನಡೆಸಲಿದ್ದಾರೆ ಎಂದು ಹೇಳಿದರು.





