ಯುಎಸ್ ಓಪನ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸಾಕೇತ್‌ಗೆ ಜಯ

ನ್ಯೂಯಾರ್ಕ್, ಆ.24: ಭಾರತದ ಯುವ ಟೆನಿಸ್ ತಾರೆ ಸಾಕೇತ್ ಮೈನೇನಿ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸಾಕೇತ್ ಅವರು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ವಿರುದ್ಧ 6-3, 7-5 ನೇರ ಸೆಟ್‌ಗಳಿಂದ ಜಯ ಗಳಿಸಿ ಮುಂದಿನ ಪಂದ್ಯಕ್ಕೆ ಅವಕಾಶ ಗಿಟ್ಟಿಸಿಕೊಂಡರು.
ಸಾಕೇತ್ ಅವರು ಎದುರಾಳಿ ಅಲ್ಬಾನೊ ಅವರನ್ನು 1 ಗಂಟೆ ಮತ್ತು 11 ನಿಮಿಷಗಳ ಆಟದಲ್ಲಿ ಮಣಿಸಿ ಎರಡನೆ ಸುತ್ತು ಪ್ರವೇಶಿಸಿದರು.
ಮುಂದಿನ ಪಂದ್ಯದಲ್ಲಿ ಅವರು ಅಮೆರಿಕದ ಮಿಚೆಲ್ ಕ್ರುಯೆಗೆರ್ ಅವರನ್ನು ಎದುರಿಸಲಿದ್ದಾರೆ. ಮಿಚೆಲ್ ಅವರು ಸರ್ಬಿಯಾದ ನಿಕೊಲೊ ಮಿಲ್ಜೆವಿಕ್ ಅವರನ್ನು 6-1, 3-6, 6-3 ಅಂತರದಿಂದ ಮಣಿಸಿದ್ದರು.
Next Story





