ಮಂಜೋಟಿ ಕೆರೆಯಲ್ಲಿ ಮೃತದೇಹ ಪತ್ತೆ

ಕಡಬ, ಆ.25: ಇಲ್ಲಿನ ಮಂಜೋಟಿ ಕೆರೆಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಬುಧವಾರ ಮದ್ಯಾಹ್ನದಿಂದ ನಾಪತ್ತೆಯಾಗಿದ್ದ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪಚಾಕೋಟೆಕಟ್ಟೆ ನಿವಾಸಿ ಸಾಂತಪ್ಪಕುಂಬಾರರದ್ದು ಆಗಿರಬಹುದೆಂದು ಶಂಕಿಸಲಾಗಿದೆ.
ಕೆರೆಯ ನೀರಿನಲ್ಲಿ ಮೃತದೇಹದ ತಲೆ ಮತ್ತು ಹೊಟ್ಟೆಭಾಗ ಮಾತ್ರ ಕಾಣಿಸುತ್ತಿದ್ದು, ಮುಖ ಪರಿಚಯ ಸಿಗುತ್ತಿಲ್ಲ. ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದೇ ಅಥವಾ ಆತ್ಮಹತ್ಯೆಗೈಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಬಗ್ಗೆ ಕಡಬ ಠಾಣೆಗೆ ಮಾಹಿತಿ ನೀಡಲಾಗಿದೆ.
Next Story





