ಈ ಒಲಿಂಪಿಕ್ ಪದಕ ವಿಜೇತನಿಗೆ ಕಾದಿದೆ ಜೈಲಿನ ಸ್ವಾಗತ !

ರಿಯೊ, ಆ.25: ಒಲಿಂಪಿಕ್ ಪದಕ ಪಡೆದು ಊರಿಗೆ ಮರಳಿರುವ ಸಿಂಧು ಮತ್ತು ಸಾಕ್ಷಿಯನ್ನು ಭಾರತಾದ್ಯಂತ ಭರ್ಜರಿಯಾಗಿ ಸ್ವಾಗತಿಸುತ್ತಿದ್ದರೆ. ಮ್ಯಾರಥಾನ್‌ನಲ್ಲಿ ಬೆಳ್ಳಿ ಪದಕ ಪಡೆದ ಇತಿಯೋಪಿಯನ್ ಕ್ರೀಡಾಪಟುಗೆ ಇತಿಯೋಪಿಯದಲ್ಲಿ ಜೈಲುಕೋಣೆಗಳು ಸ್ವಾಗತಿಸಲು ಕಾದು ನಿಂತಿದೆ ಎಂದು ವರದಿಯಾಗಿದೆ.ಇತಿಯೋಪಿಯನ್ ಸರಕಾರ ತನ್ನ ಗೋತ್ರದವರ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿದ್ದರಿಂದ ಮ್ಯಾರಥಾನ್‌ನಲ್ಲಿ ರಜತ ಪದಕ ಪಡೆದಿರುವ ಫೆಯಿಸ್ ಲಿಲೆಸ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಫೆಯಿಸ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಿಲ್ಲ ಎಂದು ಸರಕಾರ ಹೇಳಿದ್ದರೂ ಫೆಯಿಸ್ ರಿಯೊದಲ್ಲಿಯೇ ಉಳಿದಿದ್ದಾರೆ. ಇತಿಯೋಪಿಯನ್ ತಂಡ ಸೋಮವಾರ ರಾತ್ರಿ ಊರಿಗೆ ತಲುಪಿದ್ದರೂ ಫೆಯಿಸ್ ಹೋಗಿಲ್ಲ ಎನ್ನಲಾಗಿದೆ.
ಪದಕಗಳಿಸದ ಬಳಿಕ ಫೆಯಿಸ್ ತಲೆಗೆ ಕೈ ಇಟ್ಟು ತನ್ನ ಸರಕಾರದ ದೌರ್ಜನ್ಯವನ್ನು ಪ್ರತಿಭಟಿಸಿದ್ದರು. ಅವರ ಒರೊಮ ಗೋತ್ರದ ಜನರು ತಮ್ಮ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸುವ ರೀತಿ ಅದು. ಫೇಯಿಸ್ ವಿರುದ್ಧ ಅಲ್ಲಿನ ಸರಕಾರ ಆಕ್ರೋಶಗೊಂಡಿದೆ. ತನ್ನ ಗೋತ್ರದಜನರನ್ನು ಸರಕಾರ ಕೊಲ್ಲುತ್ತಿದೆ. ತನ್ನ ಸಂಬಂಧಿಕರು ಕೂಡಾ ಜೈಲಿನಲ್ಲಿದ್ದಾರೆ ಎಂದು ಫೆಯಿಸ್ ಪತ್ರಕರ್ತರೊಂದಿಗೆ ಹೇಳಿದ್ದರು. ಅಲ್ಲಿನ ಸರಕಾರ ಫೆಯಿಸ್ ಸ್ಪರ್ಧಿಸುತ್ತಿದ್ದ ದೃಶ್ಯವನ್ನು ಪ್ರಸಾರ ಮಾಡದಂತೆ ಅಲ್ಲಿನ ಚ್ಯಾನೆಲ್‌ಗಳಿಗೆ ನಿರ್ಬಂಧ ವಿಧಿಸಿತ್ತು.
ದೇಶದ್ರೋಹ ಆರೋಪ ಹೊರಿಸಿ ಗಲ್ಲಿಗೇರಿಸಬಹುದೇ ಎಂಬ ಭಯ ಫೆಯಿಸ್‌ರನ್ನು ಈಗ ಕಾಡುತ್ತಿದೆ. ಬೇರೆ ಯಾವುದಾದರೂ ದೇಶದಲ್ಲಿ ಆಶ್ರಯ ಪಡೆಯುವ ಯೋಚನೆ ಅವರಲ್ಲಿದೆ ಎನ್ನಲಾಗಿದೆ. ಫೆಯಿಸ್‌ರ ಪದಕ ಸಹಿತ ಎಂಟು ಒಲಿಂಪಿಕ್ ಪದಕಗಳು ಇತಿಯೋಪಿಯಕ್ಕೆ ಈಬಾರಿ ಒಲಿಂಪಿಕ್‌ನಲ್ಲಿ ಲಭಿಸಿದೆ. ಒಲಿಂಪಿಕ್ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು ಎಂದು ಇತಿಯೋಪಿಯನ್ ಕ್ರೀಡಾಧಿಕಾರಿಗಳು ತಿಳಿಸಿದರೂ ಪಟ್ಟಿಯಿಂದ ಫೆಯಿಸ್‌ರ ಹೆಸರನ್ನು ಕೈಬಿಡಲಾಗಿದೆ.ನಗರಾಭಿವೃದ್ಧಿಗಾಗಿಒರಾಮ ಗೋತ್ರದವರನ್ನು ಅವರ ವಾಸಸ್ಥಳದಿಂದ ತೆರವು ಗೊಳಿಸಿರುವುದು ಅಲ್ಲಿ ಆಂತರಿಕ ಕಲಹಕ್ಕೆ ನಾಂದಿಯಾಗಿತ್ತು. ಪೊಲೀಸರೊಂದಿಗಿನ ಘರ್ಷಣೆಯಲ್ಲಿ 400ಕ್ಕೂ ಅಧಿಕ ಮಂದಿ ಈಗಾಗಲೇ ಹತರಾಗಿದ್ದಾರೆ. ಫೆಯಿಸ್ ಹೆಸರಲ್ಲಿ ಅತ್ಯಂತ ವೇಗದ ಮ್ಯಾರಥಾನ್ ಓಟದ ದಾಖಲೆ ಇದೆ ಎಂದು ವರದಿ ತಿಳಿಸಿದೆ.







