ನಾಪತ್ತೆಯಾದ ಕೇರಳೀಯರ ಕುರಿತು ಎನ್‌ಐಎ ತನಿಖೆ ಆರಂಭ

ಕೊಚ್ಚಿ,ಆ.25: ಕಾಸರಗೋಡು, ಪಾಲಕ್ಕಾಡ್‌ಗಳಿಂದ ನಿಗೂಢವಾಗಿ ಕಾಣೆಯಾದವರ ಕುರಿತು ಎನ್‌ಐಎ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ. ಕೇಂದ್ರ ಗ್ರಹ ಸಚಿವಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎನ್‌ಐಎಯ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಕಾಸರಗೋಡು ಚಂಙರ ಪೊಲೀಸ್ ಠಾಣೆ, ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳನ್ನುಎನ್‌ಐಎ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ನಾಪತ್ತೆಯಾದವರು ಐಸಿಎಸ್‌ನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದುಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿ ತಿಳಿಸಿದೆ.ಸಂಚು, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ(ಯುಎಪಿಎ) ಕಾನೂನಿನ 13,38,39 ಸೆಕ್ಷನ್‌ಗಳನ್ನು ಪ್ರಕಾರ ನಾಪತ್ತೆಯಾದವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಮಾಹಿತಿಯಿದೆ.
ಅಂತಾರಾಷ್ಟ್ರೀಯ ಸಂಬಂಧ ಇರುವ ಈ ಪ್ರಕರಣದಲ್ಲಿ ಎನ್‌ಐಎ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯಸರಕಾರ ಪತ್ರ ಬರೆದಿತ್ತು ಎಂದು ವರದಿ ತಿಳಿಸಿದೆ.





