ಕುವೈಟ್: ಅಪಘಾತದಲ್ಲಿ ಭಾರತದ ವ್ಯಕ್ತಿ ಮೃತ್ಯು

ಕುವೈಟ್‌ಸಿಟಿ,ಆಗಸ್ಟ್ 25: ಕೋಝಿಕ್ಕೋಡ್‌ನ ಯುವಕ ಕುವೈಟ್‌ನಲ್ಲಿ ವಾಹನ ಅಪಘಾತದಲ್ಲಿ ಮೃತರಾಗಿದ್ದಾರೆಂದು ವರದಿಯಾಗಿದೆ. ಕೋಝಿಕ್ಕೋಡ್ ಎರಂಜಿಕ್ಕಲ್ ಕಡಂಕುಳಙರದ ಮಿದ್ಫಹ್(39) ಎಂಬವರು ಬುಧವಾರ ಬೆಳಗ್ಗೆ ಫರ್ವಾನಿಯ ಮುನಾವರ್ ಸ್ಟ್ರೀಟ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತರಾಗಿದ್ದು, ಅಂಗಡಿಗಳಿಗೆ ವಾಹನದಲ್ಲಿ ತರಕಾರಿ ಸರಬರಾಜು ಮಾಡುವ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತದೇಹವನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆಂದು ವರದಿಯಾಗಿದೆ.
Next Story





