ಪೊಲೀಸ್ ಮುಷ್ಕರಕ್ಕೆ ಕರೆ ನೀಡಿದ್ದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು, ಆ.25: ಇತ್ತೀಚೆಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪೊಲೀಸ್ ಮುಷ್ಕರಕ್ಕೆ ಕರೆ ನೀಡಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್‌ಗೆ ಹೈಕೋರ್ಟ್ ಏಕಸದಸ್ಯ ಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
50 ಸಾವಿರ ರೂ. ಮೊತ್ತದ ಬಾಂಡ್, ಶ್ಯೂರಿಟಿ, ಅನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿ ಮೀರದಿರುವುದು, ಪೊಲೀಸರ ಸಭೆ ಕರೆಯಬಾರದು, ಪೊಲೀಸ್ ಮುಷ್ಕರಕ್ಕೆ ಕರೆ ನೀಡಬಾರದು ಹಾಗೂ ಸಾಕ್ಷ ನಾಶಕ್ಕೆ ಯತ್ನಿಸಬಾರದು ಮೊದಲಾದ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಇದೇ ವೇಳೆ ಪ್ರಕರಣದ ಎರಡನೆ ಆರೋಪಿ ಬಸವರಾಜ ಕೊರ್‌ವಾರ್ ಮತ್ತು ಮೂರನೆ ಆರೋಪಿ ಗುರುಪಾದಯ್ಯರಿಗೂ ಸಹ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನೀಡಿ ಆದೇಶಿಸಿದೆ.
Next Story





