ಈ ಅದ್ಭುತ ನೋಡಿ : ಮರವನ್ನೇ ತುಂಡು ಮಾಡುವ ಕಾಗದದ ತುಂಡು !

ಹೊಸದಿಲ್ಲಿ,ಆ.25 : ಸೃಜನಶೀಲತೆಗೆ ಆಧುನಿಕ ಜಗತ್ತಿನಲ್ಲಿ ಏನೇನೂ ಕೊರತೆಯಿಲ್ಲ. ಕೆಲವರು ಅದೆಷ್ಟು ಸೃಜನಶೀಲರಾಗಿದ್ದಾರೆಂದರೆ ಕಾಗದದಿಂದ ಮರದ ತುಂಡೊಂದನ್ನೂ ಕತ್ತರಿಸಿ ಬಿಡುತ್ತಾರೆ. ಹೇಗೆಂದು ಆಶ್ಚರ್ಯ ಪಡುತ್ತೀರಾ ? ವ್ಯಕ್ತಿಯೊಬ್ಬಒಂದು ತುಂಡು ಬಿಳಿ ಕಾಗದವನ್ನು ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಕತ್ತರಿಸುತ್ತಾನೆ, ನಂತರ ಅದರ ಮಧ್ಯದಲ್ಲಿ ಇನ್ನೊಂದು ವೃತ್ತವನ್ನು ನಿರ್ಮಿಸುತ್ತಾನೆ. ನಂತರ ಮರ ಕತ್ತರಿಸುವಯಂತ್ರದೊಳಗಿಂದಬ್ಲೇಡನ್ನು ತೆಗೆದು ಅದರ ಬದಲು ಅಲ್ಲಿ ಆ ಕಾಗದದ ತುಂಡನ್ನಿರಿಸಿ ಬಿಡುತ್ತಾನೆ.
ನಂತರ ಅದರ ನಡುವೆ ಸ್ಕ್ರೂ ಹಾಕಿ ಬಿಗಿಗೊಳಿಸುವ ಆತ ಈ ಕಾಗದದ ಮೇಲೆ ಸಣ್ಣ ಸೀಳಿರುವ ಮರದ ಹಲಗೆಯೊಂದನ್ನಿರಿಸುತ್ತಾನೆ, ಯಂತ್ರವನ್ನುಚಲಾಯಿಸಿದಾಗ ಬ್ಲೇಡ್ ಜಾಗದಲ್ಲಿರುವ ಕಾಗದದ ತುಂಡು ಬಹಳ ವೇಗದಿಂದ ತಿರುಗುತ್ತದೆ. ಈ ಕಾಗದದಹತ್ತಿರ ಇನ್ನೊಂದು ಕಾಗದದ ತುಂಡನ್ನುತಂದಾಗ ಆ ತಿರುಗುತ್ತಿರುವ ಕಾಗದ ಇನ್ನೊಂದು ಕಾಗದದ ಚೂರನ್ನು ಕತ್ತರಿಸಿ ಬಿಡುತ್ತದೆ. ನಂತರ ವೇಗವಾಗಿ ತಿರುಗುತ್ತಿರುವ ಕಾಗದದ ತುಂಡಿನತ್ತ ರಟ್ಟಿನ ತುಂಡೊಂದನ್ನು ತಂದಾಗ ಅದನ್ನು ಕೂಡ ಕಾಗದದ ಚೂರು ಕತ್ತರಿಸುತ್ತದೆ. ನಂತರ ಆ ವ್ಯಕ್ತಿ ಒಂದು ಸಣ್ಣ ತೆಳು ಮರದ ತುಂಡನ್ನೂ ಈ ಕಾಗದದಿಂದ ಕತ್ತರಿಸಿ ತೋರಿಸುತ್ತಾನೆ, ಈ ಸಂದರ್ಭ ಕಾಗದದ ಚೂರು ಸ್ವಲ್ಪ ತುಂಡಾದಂತೆ ಕಂಡು ಬಂದರೂ ಒಂದು ಸಣ್ಣ ತುಂಡು ಮರವನ್ನು ಅದು ಸೀಳಿಯೇ ಬಿಟ್ಟಿತು.
ಇನ್ನೂ ಅರ್ಥವಾಗುತ್ತಿಲ್ಲವೇ ? ಹಾಗಾದರೆ ಈ ವೀಡಿಯೊ ನೋಡಿ.
ಕೃಪೆ: indianexpress.com







