ಆಹಾರದಲ್ಲಿ ಜಿರಳೆ ಪತ್ತೆ ; ದುಬೈ ಹೋಟೆಲ್ ಬಂದ್

ದುಬೈ,ಆ.25 : ನಗರದ ಮಾಲ್ ಒಂದರಫುಡ್ ಕೋರ್ಟ್ ನಲ್ಲಿ ಕಾರ್ಯಾಚರಿಸುತ್ತಿರುವ ತಾಜ್ ಸ್ಪೈಸ್ ರೆಸ್ಟಾರೆಂಟಿನಲ್ಲಿ ಚೋಲಾ ಬಟೂರಾ ಆರ್ಡರ್ ಮಾಡಿದ್ದ ದುಬೈ ನಿವಾಸಿ ಗ್ರಾಹಕರೊಬ್ಬರು ತಮಗೆ ಒದಗಿಸಲಾದ ಆಹಾರದಲ್ಲಿಜಿರಳೆಯಿತ್ತು ಎಂದು ದೂರಿ ಅದರ ಫೊಟೋ ಕೂಡ ತೆಗೆದಿದ್ದು ಸ್ಥಳೀಯಾಡಳಿತ ಈ ರೆಸ್ಟಾರೆಂಟ್ ಹಾಗೂ ಈ ಮಾಲ್ ನಲ್ಲಿರುವ ತಾಜ್ ಮಹಲ್ ಗ್ರೂಪ್ ಗೆ ಸೇರಿದತಾಜ್ ಸ್ಪೈಸ್ ಎಂಡ್ ವೋಕ್& ಸ್ಪೈಸ್ ರೆಸ್ಟಾರೆಂಟುಗಳನ್ನು ತಾತ್ಕಾಲಿಕವಾಗಿ ಮುುಚ್ಚಲು ಆದೇಶಿಸಿದೆ.
ಐದು ದಿನಗಳ ನಂತರ ಸ್ಥಳೀಯಾಡಳಿತದಿಂದ ಸೂಕ್ತ ತಪಾಸಣೆಗೊಳಪಟ್ಟು ಕ್ರಮ ಕೈಗೊಂಡ ನಂತರ ರೆಸ್ಟಾರೆಂಟುಗಳು ಮತ್ತೆ ಕಾರ್ಯಾಚರಿಸುವುವು ಎಂದು ಅವುಗಳ ಆಡಳಿತ ಮಂಡಳಿ ಹೇಳಿದೆ. ರೆಸ್ಟಾರೆಂಟ್ ಗೆ ವಿಧಿಸಿದ ದಂಡದ ಮೊತ್ತದ ಬಗ್ಗೆ ಯಾವುದೇ ಮಾಹಿತಿಯಿಲ್ಲವಾಗಿದೆ.
‘‘ಈ ದುರದೃಷ್ಟಕರ ಘಟನೆಯ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಹಾಗೂ ನಮ್ಮ ಗ್ರಾಹಕರಿಗಾದ ಅನಾನುಕೂಲತೆಗಾಗಿ ಕ್ಷಮೆ ಕೋರುತ್ತೇವೆ,’’ ಎಂದು ತಾಜ್ ಮಹಲ್ ಗ್ರೂಪ್ ಆಫ್ ರೆಸ್ಟಾರೆಂಟ್ಸ್ ಇದರ ಸ್ಥಾಪಕರೂ, ಸಿಇಒ ಹಾಗೂ ನಿರ್ದೇಶಕರೂ ಆಗಿರುವ ಪಿ ವೆಂಕಟೇಶ್ ಹೇಳಿದ್ದಾರೆ.
ಹೋಟೆಲ್ ನ ಎಲ್ಲಾ ಭಾಗಗಳಲ್ಲಿಯೂ ಕ್ರಿಮಿಕೀಟಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆಯೆಂದೂ ಅವರು ತಿಳಿಸಿದ್ದಾರೆ. ಇತ್ತೀಚಿಗಿನ ಘಟನೆಯ ವಿಚಾರದಲ್ಲಿ ಸಂಬಂಧಿತರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ.







