ಬಂಟ್ವಾಳದಲ್ಲಿ ಕೃಷ್ಣ ಜಯಂತಿ ಆಚರಣೆ

ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆಯು ಬಂಟ್ವಾಳ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಜರಗಿತು. ತಹಶೀಲ್ದಾರ್ ಪುರಂದರ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಕ್ಷಕ ಅಶೋಕ್ ಕುಮಾರ್ ಅಳಿಕೆ ಪ್ರಧಾನ ಭಾಷಣಗೈದರು. ಮುಖ್ಯ ಅಥಿತಿಗಳಾಗಿ ಚಂದ್ರಶೇಖರ ಅಳಿಕೆ, ರಾಘವ ಮಣಿಯಾಣಿ ಭಾಗವಹಿಸಿದ್ದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಉಪ ತಹಶೀಲ್ದಾರರಾದ ಜೆ.ಪಿ.ರೋಡ್ರಿಗಸ್, ಭಾಸ್ಕರ್ ಹಾಗೂ ಪರಮೇಶ್ವರ ನಾಯಕ್, ಕಂದಾಯ ನಿರೀಕ್ಷಕರಾದ ರಾಮ ಕೆ., ದಿವಾಕರ್, ನವೀನ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
Next Story





