ಅಪರಾಧಿ ಶರ್ಮನಿಂದ ಆತ್ಮಹತ್ಯೆ ಯತ್ನ
ನಿರ್ಭಯಾ ಅತ್ಯಾಚಾರ ಪ್ರಕರಣ
ಹೊಸದಿಲ್ಲಿ, ಆ.25: ವಿಶ್ವದ ಗಮನವನ್ನೇ ಸೆಳೆದಿದ್ದ ದಿಲ್ಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿ ಯೊಬ್ಬಳ(ನಿರ್ಭಯಾ) ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ವಿನಯ್ ಶರ್ಮ ಎಂಬಾತ ಗುರುವಾರ ತಿಹಾರ್ ಕಾರಾಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ವರದಿಗಳು ತಿಳಿಸಿವೆ.
ಆತನನ್ನು ಹೊಸದಿಲ್ಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. 2012ರಲ್ಲಿ ದಿಲ್ಲಿಯಲ್ಲಿ ನಡೆದ 23ರ ಹರೆಯದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲ್ಪಟ್ಟಿರುವ 6 ಮಂದಿ ಅಪರಾಧಿಗಳಲ್ಲಿ ಶರ್ಮ ಒಬ್ಬನಾಗಿದ್ದಾನೆ.
Next Story





