ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್‌ಗೆ 44 ರನ್ ಜಯ

ಸೌತ್‌ಹ್ಯಾಂಪ್ಶನ್, ಆ.25: ಇಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ, ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 44 ರನ್‌ಗಳ ಜಯ ಗಳಿಸಿದೆ.
ಗೆಲುವಿಗೆ 260 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ತಂಡ34.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸುವಷ್ಟರಲ್ಲಿ ಆಟಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಆಟ ವನ್ನು ಮುಂದುವರಿಸಲು ಸಾಧ್ಯವಾಗದೆ ಇದ್ದಾಗ ಡಕ್‌ವರ್ತ್ ಮತ್ತು ಲೂವಿಸ್ ನಿಯಮದಂತೆ ಇಂಗ್ಲೆಂಡ್ 44 ರನ್‌ಗಳ ಜಯ ಗಳಿಸಿರುವುದಾಗಿ ಘೋಷಿಸಲಾಯಿತು.
ಇಂಗ್ಲೆಂಡ್ ತಂಡದ ಜೇಸನ್ ರಾಯ್ 65 ರನ್, ಜೋ ರೂಟ್ 61 ರನ್, ನಾಯಕ ಇಯಾನ್ ಮೊರ್ಗನ್ ಔಟಾಗದೆ 33 ರನ್ ಮತ್ತು ಬೆನ್ ಸ್ಟೋಕ್ಸ್ ಔಟಾಗದೆ 15 ರನ್ ಗಳಿಸಿ ಗೆಲುವಿಗೆ ನೆರವಾದರು.
ಅರ್ಧಶತಕ ದಾಖಲಿಸಿದ ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸಿತ್ತು.
ನಾಯಕ ಅಝರ್ ಅಲಿ ಔಟಾಗದೆ 82 ರನ್, ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್ 55 ರನ್, ಬಾಬರ್ ಅಝಮ್ 40 ರನ್, ಶಾರ್ಜೆಲ್ ಖಾನ್ 16 ರನ್, ಮುಹಮ್ಮದ್ ಹಫೀಝ್ 11 ರನ್, ಶುಐಬ್ ಮಲಿಕ್ 17ರನ್, ಮುಹಮ್ಮದ್ ನವಾಝ್ ಔಟಾಗದೆ 17 ರನ್ ಮತ್ತು ಇಮಾದ್ ವಾಸೀಮ್ 17 ರನ್ ಗಳಿಸಿ ನಿರ್ಗಮಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಪಾಕಿಸ್ತಾನ 50 ಓವರ್‌ಗಳಲ್ಲಿ 260/6( ಅಝರ್ ಅಲಿ 82, ಸರ್ಫರಾಝ್ ಅಹ್ಮದ್ 55, ಬಾಬರ್ ಅಝಮ್ 40; ರಶೀದ್ 51ಕ್ಕೆ 2).ಇಂಗ್ಲೆಂಡ್ 34.3 ಓವರ್‌ಗಳಲ್ಲಿ 194/3( ರಾಯ್ 65, ರೂಟ್ 61; ನವಾಝ್ 31ಕ್ಕೆ 1)





