ಫ್ಲಾಟ್‌ನಲ್ಲೇ 500 ಗಿಡ ಬೆಳೆಸಿದ ಅಪರೂಪದ ಹಸಿರುಪ್ರೇಮಿ
ಈಕೆ ಅಪಾರ್ಟ್‌ಮೆಂಟ್ ಅರಣ್ಯದ ರೂವಾರಿ

ಸಹೃದಯಿಗಳಷ್ಟೇ ಗಿಡಗಳನ್ನು ಸೂಕ್ತವಾಗಿ ಆರೈಕೆ ಮಾಡಬಲ್ಲರು ಎನ್ನುವುದು ಪ್ರಾಜ್ಞರ ಮಾತು. ನಗರ ಬದುಕಿನ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡಿರುವ ಮಂದಿಗೆ ಅದು ನೀಡುವ ಶುದ್ಧಗಾಳಿ, ಬೀಸುವ ಗಾಳಿಗೆ ಮೈಕುಲುಕಿಸುವ ಎಲೆಗಳ ನರ್ತನ, ಅದರ ತಾಜಾತನ ಹೆಚ್ಚು ಆಪ್ಯಾಯಮಾನ ಎನಿಸಬಹುದು. ನಮಗೂ ಅಂಥ ಗಿಡಗಳಿದ್ದರೆ ಎಂಬ ಆಸೆ ನಿಮಲ್ಲಿ ಹುಟ್ಟದಿರದು.
ಆದರೆ ಇದು ಫ್ಲಾಟ್‌ನಲ್ಲೇ ಅರಣ್ಯ ಬೆಳೆಸಿದ ಅಪರೂಪದ ಪರಿಸರ ಪ್ರೇಮಿಯೊಬ್ಬರ ಕಥೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಪ್ರದೇಶದಲ್ಲಿ ಸಮ್ಮರ್ ರೇನ್ ಓಕ್ಸ್ ಎಂಬಾಕೆ 1200 ಚದರ ಅಡಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ 500ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಮಹಾನಗರಗಳ ಮಾಲಿನ್ಯ ತಡೆಯಲು ಇದು ಏಕೈಕ ಮಾರ್ಗ ಎಂಬ ದೃಢನಂಬಿಕೆ ಅವರದ್ದು.
ಈಕೆಯ ಐಷಾರಾಮಿ ಅಪಾರ್ಟ್‌ಮೆಂಟ್‌ನ ಪ್ರತಿ ಕೊಠಡಿ ಕೂಡಾ ಹಸಿರಿನಿಂದ ನಳನಳಿಸುತ್ತದೆ. ಬೆಡ್‌ರೂಂ ಹಾಗೂ ಹಜಾರದಲ್ಲಿ ತರುಲತೆಗಳು ಇಣುಕುತ್ತವೆ. ಸ್ನಾನಗೃಹ ಕೂಡಾ ಪುಟ್ಟ ಗಿಡಗಳಿಂದ ತುಂಬಿವೆ. ಹಜಾರದ ತುಂಬೆಲ್ಲ ಗಿಡಗಳನ್ನು ಹೊಂದಿರುವ ಚಟ್ಟಿಗಳಿವೆ. ತರಕಾರಿ ತೋಟವೂ ಇದೆ. ಇಂಥ ಇಂಡೋರ್ ಜಂಗಲ್‌ನಲ್ಲಿ ಆಕೆಯ ವಾಸ.
ಕೃಪೆ: indiatimes.com





