ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯೇ ಬಿಗ್ ಹಿಟ್
ಅಮಿತಾಭ್ ಗೆ ಎರಡನೇ ಸ್ಥಾನ

ನವದೆಹಲಿ, ಆ.26: ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫಾಲೋವರ್ಸ್ ಸಂಖ್ಯೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಫಾಲೋವರ್ಸ್ ಸಂಖ್ಯೆಯನ್ನು ದಾಟಿದ್ದು ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯ ಟ್ವಿಟ್ಟರ್ ಫಾಲೋವರ್ಸ್ ಇರುವ ನಾಯಕರೆಂಬ ಹೆಗ್ಗಳಿಕೆಗೆ ಪ್ರಧಾನಿ ಪಾತ್ರರಾಗಿದ್ದಾರೆ.
ಮೋದಿಗೆ ಆಗಸ್ಟ್ 25ರ ತನಕ ಟ್ವಿಟ್ಟರ್ ನಲ್ಲಿ 2.21 ಕೋಟಿ ಫಾಲೋವರ್ಸ್ ಇದ್ದರೆ, ಅಮಿತಾಭ್ ಅವರಿಗೆ 2 ಕೋಟಿ ಫಾಲೋವರ್ಸ್ ಇದ್ದಾರೆ. ಈ ವರ್ಷದ ಜನವರಿಯಲ್ಲಿ ಮೋದಿಯವರ ಫಾಲೋವರ್ಸ್ ಸಂಖ್ಯೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದು ಮೋದಿಯ ಫಾಲೋವರ್ಸ್ ಸಂಖ್ಯೆ ಆಗ 17,371,600 ಆಗಿದ್ದರೆ ಖಾನ್ ಅವರ ಫಾಲೋವರ್ಸ್ ಸಂಖ್ಯೆ 17,351,100 ಆಗಿತ್ತು. ಆಗ ಮೋದಿ ಭಾರತದ ಅತ್ಯಧಿಕ ಟ್ವಿಟ್ಟರ್ ಫಾಲೆವರ್ಸ್ ಇರುವ ಗಣ್ಯರಲ್ಲಿ ಎರಡನೆ ಸ್ಥಾನ ಪಡೆದಿದ್ದರು.
ಈಗ ಶಾರುಖ್ ಖಾನ್ ಅವರ ಫಾಲೋವರ್ಸ್ ಸಂಖ್ಯೆ 2.09 ಕೋಟಿ ಆಗಿದೆ. ಅತ್ತ ಮೋದಿಯವರ ಫಾಲೋವರ್ಸ್ ಸಂಖ್ಯೆ2015ರಲ್ಲಿ ಪ್ರತಿ ತಿಂಗಳ 10 ಲಕ್ಷದಂತೆ ಹೆಚ್ಚುತ್ತಲೇ ಇದ್ದುಕಳೆದ ವರ್ಷದ ಸೆಪ್ಟಂಬರ್ ತಿಂಗಳಲಿ್ಲ1.5 ಕೋಟಿ ದಾಟಿದ್ದು ನವೆಂಬರ್ 20ರಂದು 1.6 ಕೋಟಿಯಷ್ಟಾಗಿತ್ತು.
ಆದರೆ 2016 ರಲ್ಲಿ ಮೋದಿಯವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 50 ಲಕ್ಷದಷ್ಟು ಮಾತ್ರ ಹೆಚ್ಚಾಗಿದೆ.
2009 ರಿಂದ ಮೋದಿಯವರ ಟ್ವಿಟ್ಟರ್ ಖಾತೆ ಚಾಲ್ತಿಯಲ್ಲಿದ್ದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ನಂತರ ವಿಶ್ವದಲ್ಲಿಯೇ ಅತ್ಯಧಿಕ ಫಾಲೋವರ್ಸ್ ಸಂಖ್ಯೆಯಿರುವ ರಾಜಕಾರಣಿಯಾಗಿದ್ದಾರೆ ಮೋದಿ.
ಜನರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ತಮ್ಮ ಮೇಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ್, ಮನ್ನ್ ಕಿ ಬಾತ್ ಮತ್ತಿತರ ಅಭಿಯಾನಗಳನ್ನು ಅವರು ಟ್ವಿಟ್ಟರ್ ಮೂಲಕ ಬಹಳಷ್ಟು ಪ್ರಚಾರ ನಡೆಸಿದ್ದರು.





