ತನ್ನ ಕುಟುಂಬವೇ ತನ್ನನ್ನು ಕೊಲ್ಲುತ್ತದೆ ಎಂದು ಭೀತಿ ವ್ಯಕ್ತಪಡಿಸಿ ವೀಡಿಯೊ ಮಾಡಿದ್ದ ಯುವತಿ ಮೃತ್ಯು

ಹತ್ರೋಸ್(ಉತ್ತರಪ್ರದೇಶ),ಆಗಸ್ಟ್ 26: ಚಲಿಸುತ್ತಿರುವ ರೈಲಿನಲ್ಲಿ ಮೊಬೈಲ್ ಕ್ಯಾಮರಾದಲ್ಲಿ ವೀಡಿಯೊ ಮಾಡಿ ಅದರಲ್ಲಿ ತನ್ನನ್ನು ಮನೆಯವರು ಕೊಲ್ಲುತ್ತಾರೆ ಎಂದಿದ್ದ ಯುವತಿ ಮೃತಳಾಗಿದ್ದಾಳೆಂದು ವರದಿಯಾಗಿದೆ." ತಂದೆಮತ್ತುಸಹೋದರರು ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ.ಅವರು ಬಲವಂತದಿಂದ ಗ್ರಾಮಕ್ಕೆ ಕರೆದೊಯ್ಯುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದೆ. ನನಗೆ ಏನಾದರೂ ಸಂಭವಿಸಿದರೆ ಅದರ ಹೊಣೆಗಾರರು ಅವರೇ ಆಗಿರುತ್ತಾರೆ. ನಾನು ಇಮ್ರಾನ್‌ನನ್ನು ಮದುವೆಯಾಗಳು ಬಯಸುತ್ತಿದ್ದೇನೆ" ಎಂದು ಗುರುವಾರ ಬಹಿರಂಗವಾಗಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ ಈ ವೀಡಿಯೊದಲ್ಲಿ ಕಂಡು ಬಂದಿದ್ದ ಸೋನಿ(26) ಎಂಬ ಯುವತಿ ಅಷ್ಟರಲ್ಲಿ ಮೃತಳಾಗಿದ್ದಳು ಎಂದು ವರದಿ ತಿಳಿಸಿದೆ.
ವೀಡಿಯೊ ಕ್ಲಿಪ್‌ನ ಆಧಾರದಲ್ಲಿ ಪೊಲೀಸರು ಸೋನಿಯ ಸಂಬಂಧಿಕರ ವಿರುದ್ಧ ಕೇಸು ದಾಖಲಿಸಿದ್ದಾರೆ.ಪಶ್ಚಿಮ ಉತ್ತರಪ್ರದೇಶದ ಹತ್ರಾಸ್‌ನಲ್ಲಿ ವಾಸವಿರುವ ಸೋನಿಯ ತಂದೆ ತಾಯಿ ಮತ್ತು ನಾಲ್ವರು ಸಹೋದರ ಸಹಿತ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಲ್ಲ ಆರೋಪಿಗಳು ಭೂಗತರಾಗಿದ್ದಾರೆ.ಆದರೆ ಯುವತಿ ಸಹಜವಾಗಿ ಮೃತಳಾದಳೇ ಅಥವಾ ಕೊಲೆಎಸಗಲಾಗಿದೆಯೇ ಎಂದು ಸ್ಪಷ್ಟವಾಗಿಲ್ಲ. ಶವಸಂಸ್ಕಾರ ನಡೆಸಿದ್ದಲ್ಲಿಂದ ಮೃತದೇಹವನ್ನು ಹೊರತೆಗೆದು ಪೋಸ್ಟ್ ಮಾರ್ಟಂ ನಡೆಸಲಾಗಿದೆ. ನಂತರ ಕೆಲವು ಸ್ಯಾಂಪಲ್‌ಗಳನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಕಳೆದ ಶುಕ್ರವಾರ ಯುವತಿ ಮೃತಳಾಗಿದ್ದಳುಎಂದು ಕುಟುಂಬ ಹೇಳಿತ್ತು. ಆದರೆ ಅವಳು ಹೇಗೆ ಸತ್ತಳೆಂದು ಕುಟುಂಬ ತಿಳಿಸಿರಲಿಲ್ಲ. ಕೆಲವು ದಿವಸಗಳ ಹಿಂದೆ ಸೋನಿ ಕುಟುಂಬದ ಜತೆ ಊರಿಗೆ ಬಂದಿದ್ದಳು ಎಂದು ನೆರೆಯವರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.







