ದೇರಳಕಟ್ಟೆ: ಮದ್ಯಪಾನ ಮುಕ್ತರ ಸಮಾವೇಶ ಮತ್ತು ಕುಟುಂಬಿಕರ ಸಹಮಿಲನ ಸಭೆ

ಕೊಣಾಜೆ, ಆ.26: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಅಧೀನದ ಕ್ಷೇಮದ ಮನೋರೋಗ ಚಿಕಿತ್ಸಾ ವಿಭಾಗದ ಅಮಲು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪಾನಮುಕ್ತರಾಗಿ ಜೀವನ ನಡೆಸುತ್ತಿರುವ ಪಾನಮುಕ್ತ ಬಂಧುಗಳ ಸಮಾವೇಶ ಹಾಗೂ ಕುಟುಂಬಿಕರ ಸಹಮಿಲನ ಸಭೆ ಶುಕ್ರವಾರ ಕ್ಷೇಮದಲ್ಲಿ ನಡೆಯಿತು.
ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಪೆಸರ್ ಡಾ.ರಾಜೇಶ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಶಿವಕುಮಾರ್ ಹೀರೇಮಠ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಳ್ತಂಗಡಿ ವಿಭಾಗ ಶಿಬಿರಾಧಿಕಾರಿ ರಾಘವೇಂದ್ರ ಆಚಾರ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮನೋರೋಗ ವಿಭಾಗದ ಸಮಾಜಸೇವಾಕರ್ತೆ ಆಗ್ನಿಟಾ ಕಾರ್ಯಕ್ರಮ ನಿರೂಪಿಸಿದರು.
Next Story





