ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ
ಪ್ರಾಮಾಣಿಕ ಚಾಲಕ ಪ್ರತಾಪ್ ಶೆಟ್ಟಿಗೆ ಕಮಿಷನರ್ ಅಭಿನಂದನೆ

ಮಂಗಳೂರು, ಆ.26: ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಎಂಬವರು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ದೀಪ್ತಿ ಎಂಬವರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಕುಳಾಯಿಯಲ್ಲಿ ನಡೆಯುವ ಮದುವೆಯ ಕಾರ್ಯಕ್ರಮಕ್ಕೆ ಆಟೊದಲ್ಲಿ ತೆರಳಿದ್ದರು. ಆದರೆ ಆಟೊದಿಂದ ಇಳಿಯುವ ವೇಳೆ ಅವರು ಚಿನ್ನಾಭರಣದ ಬ್ಯಾಗನ್ನು ಆಟೊದಲ್ಲಿಯೆ ಮರೆತು ಹೋಗಿದ್ದರು. ಇದನ್ನು ನಂತರ ಗಮನಿಸಿದ ರಿಕ್ಷಾಚಾಲಕ ಪ್ರತಾಪ್ ಶೆಟ್ಟಿ ಮಂಗಳೂರು ಉತ್ತರ ಠಾಣಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಗಮನಿಸಿದ ಮಂಗಳೂರು ಪೊಲೀಸ್ ಕಮೀಷನರ್ ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಅವರಿಗೆ 5 ಸಾವಿರ ರೂ. ಬಹುಮಾನವನ್ನು ನೀಡಿದರು.
ಬ್ಯಾಗ್‌ನಲ್ಲಿದ್ದ ದೀಪ್ತಿ ಅವರ ನಂಬರನ್ನು ಪಡೆದು ಅವರನ್ನು ಪೊಲೀಸ್ ಕಮೀಷನರ್ ಕಚೇರಿಗೆ ಕರೆಸಿ ಚಿನ್ನಾಭರಣದ ಬ್ಯಾಗನ್ನು ಅವರಿಗೆ ಹಸ್ತಾಂತರಿಸಲಾಯಿತು.
Next Story





