ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯೇ ಬಿಗ್ ಹಿಟ್
ಹೊಸದಿಲ್ಲಿ, ಆ.26: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫಾಲೋವರ್ಸ್ ಸಂಖ್ಯೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಫಾಲೋವರ್ಸ್ ಸಂಖ್ಯೆಯನ್ನು ದಾಟಿದ್ದು ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯ ಟ್ವಿಟರ್ ಫಾಲೋವರ್ಸ್ ಇರುವ ನಾಯಕರೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮೋದಿಗೆ ಆಗಸ್ಟ್ 25ರ ತನಕ ಟ್ವಿಟರ್‌ನಲ್ಲಿ 2.1 ಕೋಟಿ ಫಾಲೋವರ್ಸ್ ಇದ್ದರೆ, ಅಮಿತಾಭ್ ಅವರಿಗೆ 2 ಕೋಟಿ ಫಾಲೋವರ್ಸ್ ಇದ್ದಾರೆ. ಈ ವರ್ಷದ ಜನವರಿಯಲ್ಲಿ ಮೋದಿಯವರ ಫಾಲೋವರ್ಸ್ ಸಂಖ್ಯೆ ಸೂಪರ್ ಸ್ಟಾರ್ ಶಾರುಕ್‌ಖಾನ್‌ರವರನ್ನು ಹಿಂದಿಕ್ಕಿದ್ದು ಮೋದಿಯ ಫಾಲೋವರ್ಸ್ ಸಂಖ್ಯೆ ಆಗ 17,371,600 ಆಗಿದ್ದರೆ ಖಾನ್ ಅವರ ಫಾಲೋವರ್ಸ್ ಸಂಖ್ಯೆ 17,351,100 ಆಗಿತ್ತು. ಆಗ ಮೋದಿ ಭಾರತದ ಅತ್ಯಧಿಕ ಟ್ವಿಟರ್ ಫಾಲೋವರ್ಸ್ ಇರುವ ಗಣ್ಯರಲ್ಲಿ ಎರಡನೆ ಸ್ಥಾನ ಪಡೆದಿದ್ದರು.
ಈಗ ಶಾರುಕ್‌ಖಾನ್‌ರವರ ಫಾಲೋವರ್ಸ್ ಸಂಖ್ಯೆ 2.6 ಕೋಟಿ ಆಗಿದೆ. ಅತ್ತ ಮೋದಿಯವರ ಫಾಲೋವರ್ಸ್ ಸಂಖ್ಯೆ 2015ರಲ್ಲಿ ಪ್ರತಿ ತಿಂಗಳ 10 ಲಕ್ಷದಂತೆ ಹೆಚ್ಚುತ್ತಲೆ ಇದ್ದು ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ 1.5 ಕೋಟಿ ದಾಟಿದ್ದು ನವೆಂಬರ್ 20ರಂದು 1.6 ಕೋಟಿಯಷ್ಟಾಗಿತ್ತು. ಆದರೆ 2016ರಲ್ಲಿ ಮೋದಿಯವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 50 ಲಕ್ಷದಷ್ಟು ಮಾತ್ರ ಹೆಚ್ಚಾಗಿದೆ.
ಮೋದಿ 2009ರಿಂದ ಮೋದಿಯವರ ಟ್ವಿಟರ್ ಖಾತೆ ಚಾಲ್ತಿಯಲ್ಲಿದ್ದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ನಂತರ ವಿಶ್ವದಲ್ಲಿಯೇ ಅತ್ಯಧಿಕ ಫಾಲೋವರ್ಸ್ ಸಂಖ್ಯೆಯಿರುವ ರಾಜಕಾರಣಿಯಾಗಿದ್ದಾರೆ.





