ಭಾರತದ ಪ್ರದರ್ಶನಗೊಳ್ಳದ ಶಕ್ತಿ ವಿಶ್ವದಲ್ಲೇ ಅತಿ ದೊಡ್ಡದಿದೆ: ಷಣ್ಮುಗರತ್ನಂ

ಹೊಸದಿಲ್ಲಿ, ಆ.26: ಭಾರತವು ತನ್ನ ಈಡೇರಿಕೆಯಾಗದ ಸಾಮರ್ಥ್ಯವನ್ನು ಅರಿತುಕೊಳ್ಳುವ ತುರ್ತನ್ನು ತೋರಿಸುವ ಅಗತ್ಯವಿದೆ. ಭಾರತದ ಈ ಸಾಮರ್ಥ್ಯ ಪ್ರಪಂಚದಲ್ಲೇ ಅತಿ ದೊಡ್ಡದಿದೆಯೆಂದು ಭಾರತ ಭೇಟಿಗಾಗಿ ಆಗಮಿಸಿರುವ ಸಿಂಗಾಪುರದ ಉಪಪ್ರಧಾನಿ ಧರ್ಮನ್ ಷಣ್ಮುಗರತ್ನಂ ಶುಕ್ರವಾರ ಹೇಳಿದ್ದಾರೆ.
ಸುಧಾರಣಾ ಕಾರ್ಯಸೂಚಿಯ ವೇಗವನ್ನು ಹೆಚ್ಚಿಸಬೇಕು. ಅದಿನ್ನೂ ಬಹಳ ಅಪೂರ್ಣವಾಗಿದೆಯೆಂದು ಅವರು ಜ್ಞಾಪಿಸಿದ್ದಾರೆ.
ಮೊದಲ ‘ಬದಲಾಗುತ್ತಿರುವ ಭಾರತ’ ಉಪನ್ಯಾಸ ನೀಡುತ್ತಿದ್ದ ಷಣ್ಮುಗರತ್ನಂ, ಭಾರತದ ಕಡಿಮೆ ರಫ್ತು ಪ್ರಮಾಣ ಕಣ್ಣಿಗೆ ರಾಚುವ ಕೊರತೆಯಾಗಿದೆ ಎಂದರು.
ಅವರು, ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಿಂದ ಇಕಾನಮಿಕ್ಸ್ ಪದವಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಪದವಿ ಪಡೆದರಾಗಿದ್ದಾರೆ.
ಸುಧಾರಣಾ ಕಾರ್ಯಸೂಚಿ ಬಹಳಷ್ಟು ಬಾಕಿಯಿದೆ. ಬದಲಾವಣೆಯ ವೇಗವನ್ನು ಹೆಚ್ಚಿಸಬೇಕೆಂದು ಷಣ್ಮುಗರತ್ನಂ ಹೇಳಿದರು.
ಭಾರತವು ಪ್ರಪಂಚಕ್ಕೆ ರಫ್ತು ಮಾಡುವುದರತ್ತ ಗಮನಹರಿಸಬೇಕು. ಅದು ಭಾರತದ ಆರ್ಥಿಕತೆಯಲ್ಲಿ ಕಣ್ಣಿಗೆ ರಾಚುವ ಕೊರತೆಯಾಗಿದೆ. ಭಾರತದಲ್ಲಿ ವಿಶ್ವದ ಶೇ.18ರಷ್ಟು ಜನಸಂಖ್ಯೆಯಿದೆ. ಆದರೆ, ರಫ್ತಿನ ಪ್ರಮಾಣ ಕೇವಲ ಶೇ.2ರಷ್ಟಿದೆಯೆಂದು ಶ್ರೀಲಂಕಾದ ತಮಿಳು ತಮಿಳುಮೂಲದವರಾಗಿರುವ ಅವರು ತಿಳಿಸಿದರು.
ಭಾರತವು ಜಾಗತಿಕ ಆರ್ಥಿಕತೆಯೊಂದಿಗೆ ಇನ್ನಷ್ಟು ಆಳವಾಗಿ ಹಾಗೂ ವ್ಯೆಹಾತ್ಮಕವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಜನಸಂಖ್ಯಾ ಶಾಸ್ತ್ರ ಹಾಗೂ ಜಾಣ ಯಂತ್ರಗಳ ವಿರುದ್ಧ ಸ್ಪರ್ಧೆಯಿರುವ ಕಾರಣ ಭಾರತ ಇದನ್ನು ಭಾರೀ ತುರ್ತಾಗಿ ಮಾಡಬೇಕೆಂದು ಷಣ್ಮುಗರತ್ನಂ ಹೇಳಿದರು.







