ಟರ್ಕಿ: ಆತ್ಮಹತ್ಯಾ ಬಾಂಬ್ 11 ಪೊಲೀಸರ ಸಾವು
ಇಸ್ತಾಂಬುಲ್, ಆ. 26: ಶಂಕಿತ ಕುರ್ದಿಶ್ ಬಂಡುಕೋರರು ಶುಕವಾರ ನಡೆಸಿದ ಆತ್ಮಹತ್ಯಾ ಟ್ರಕ್ ಬಾಂಬ್ ದಾಳಿಯೊಂದರಲ್ಲಿ ಟರ್ಕಿಯ 11 ಪೊಲೀಸ್ ಅಕಾರಿಗಳು ಮೃತಪಟ್ಟಿದ್ದಾರೆ ಹಾಗೂ 78 ಮಂದಿ ಗಾಯಗೊಂಡಿದ್ದಾರೆ.
"ಬಾಂಬ್ ದಾಳಿಯಲ್ಲಿ ಸಿರಿಯದ ಗಡಿಗೆ ಹೊಂದಿಕೊಂಡಿರುವ ಸೈಝರ್ ಪಟ್ಟಣದ ಪೊಲೀಸ್ ಕೇಂದ್ರ ಕಚೇರಿ ಸಂಪೂರ್ಣವಾಗಿ ನಾಶವಾಗಿದೆ.ೆಕೆ ಭಯೋತ್ಪಾದಕ ಗುಂಪು ಸ್ಥಳೀಯ ಸಮಯ ಬೆಳಗ್ಗೆ 6:45ಕ್ಕೆ ಗಲಭೆ ನಿಗ್ರಹ ಪೊಲೀಸ್ ಪಡೆಯ ಕಚೇರಿಯ ಮೇಲೆ ಆತ್ಮಹತ್ಯಾ ಟ್ರಕ್ ಬಾಂಬ್ ದಾಳಿ ನಡೆಸಿತು’’ ಎಂದು ಪ್ರಾಂತೀಯ ಗವರ್ನರ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.ಾಯಗೊಂಡ 78 ಮಂದಿಯಲ್ಲಿ ಮೂವರು ನಾಗರಿಕರು ಎಂದು ಅದು ಹೇಳಿದೆ.
ಸಿರಿಯದ ಒಳಗೆ ಕುರ್ದಿಶ್ ಬಂಡುಕೋರರು ಹೊಂದಿದ್ದ ನೆಲೆಗಳ ಮೇಲೆ ಟರ್ಕಿಯ ಸೇನೆ ಶೆಲ್ ದಾಳಿ ನಡೆಸಿದ ಗಂಟೆಗಳ ಬಳಿಕ ಈ ಸೊಓಂೀಟ ನಡೆದಿದೆ.
Next Story





