ದೇವರ ಹೆಸರಿನಲ್ಲಿ ನಡೆಯುವ ಅಸ್ಪಶ್ಯತೆಗೆ ಕೊನೆಯಿಲ್ಲವೇ?
ಮಾನ್ಯರೆ,
ಜಾತಿ, ಧರ್ಮ, ಪಂಗಡಗಳಿಗೆ ಸಂಬಂಧಿಸಿದಂತೆ ‘‘ಈ ದೇವರು ನಮ್ಮ ಜಾತಿಗೆ ಮಾತ್ರ ಸೀಮಿತ’’ ಎಂದು ನಂಬಿಕೊಂಡು ಬದುಕುತ್ತಿರುವ ಮೂರ್ಖರು ದೇಶಾದ್ಯಂತ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೊಂದು ನಿದರ್ಶನ ಇಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಕಕ್ಕೆಹರವು ಎಂಬ ಗ್ರಾಮದಲ್ಲಿ ಮಾರಮ್ಮ ದೇವಿಯ ದೇವಾಲಯದಲ್ಲಿ ಅಸ್ಪಶ್ಯತೆ ತುಂಬಾ ವರ್ಷಗಳಿಂದ ಹೆಮ್ಮರವಾಗಿ ಬೆಳೆದುಕೊಂಡು ಬಂದಿದೆ. ಅಲ್ಲಿ ದಲಿತ ಸಮುದಾಯದವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಇವರು ತಂದ ಪೂಜೆ ಸಾಮಗ್ರಿಗಳನ್ನು ಹಾಗೂ ದುಡ್ಡನ್ನು ಆ ದೇಗುಲದ ಬಾಗಿಲಲ್ಲಿ ಇಟ್ಟು ದೂರ ನಿಲ್ಲುವ ಹಾಗೂ ಅದನ್ನು ತೀರ್ಥ ಹಾಕಿ ಒಳಗೆ ತೆಗೆದುಕೊಳ್ಳುವ ದುಷ್ಟ, ನೀಚ ಪದ್ಧತಿಯನ್ನು ಇನ್ನೂ ಅನುಸರಿಸಲಾಗುತ್ತಿದೆ. ಇಂತಹ ಅನಿಷ್ಟ ಪದ್ಧ್ದತಿಯನ್ನು ಇನ್ನಾದರೂ ಕೊನೆಗಾಣಿಸಬೇಕಾಗಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಅಸ್ಪಶ್ಯತೆಯ ವಿರುದ್ಧ ಮುಜರಾಯಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
Next Story





