ಗುಲ್ಷನ್ ಕೆಫೆ ಮೇಲೆ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ತಮೀಮ್ ಸೇರಿದಂತೆ 4 ಉಗ್ರರು ಪೊಲೀಸರ ಗುಂಡಿಗೆ ಬಲಿ

ಢಾಕಾ, ಆ.27: ಢಾಕಾದ ಗುಲ್ಷನ್ ಕೆಫೆ ಮೇಲೆ ಜುಲೈ 1ರಂದು ದಾಳಿ ನಡೆಸಿದ ಪ್ರಕರಣದ ಮಾಸ್ಟರ್ ಮೈಂಡ್ ತಮೀಮ್ ಅಹ್ಮದ್ ಚೌಧರಿ ಸೇರಿದಂತೆ ನಾಲ್ವರು ಉಗ್ರರನ್ನು ಪೊಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ.
ಇಂದು ಬೆಳಗ್ಗೆ ಪೊಲೀಸರು ಖಚಿತ ವರ್ತಮಾನದ ಮೇರೆಗೆ ನಾರಾಯಣ್‌ಗಂಜ್ ನಲ್ಲಿದ್ದ ಉಗ್ರರ ಅಡಗುತಾಣಕ್ಕೆ ದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿದರು. ಪೊಲೀಸರ ಎನ್‌ಕೌಂಟರ್‌ಗೆ ಸಿಲುಕಿ ಸತ್ತವರಲ್ಲಿ ಅಹ್ಮದ್ ಚೌಧರಿ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾದ ಪ್ರಜೆ ತಮೀಮ್ ಮೂರು ವರ್ಷಗಳ ಹಿಂದೆ ಬಾಂಗ್ಲಾಕ್ಕೆ ವಾಪಸಾಗಿದ್ದನು. ಉಗ್ರರ ನೇತೃತ್ವ ವಹಿಸಿ ಯುವಕರಿಗೆ ಹಣಕಾಸಿನ ನೆರವು ನೀಡಿ ಅವರನ್ನು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಪ್ರೋತ್ಸಾಹ ನೀಡುತ್ತಿದ್ದ ಎಂದು ಗೊತ್ತಾಗಿದೆ.
ಜುಲೈ 1ರಂದು ಐವರು ಉಗ್ರರು ಗುಲ್ಷನ್ ಕೆಫೆ ಮೇಲೆ ದಾಳಿ ನಡೆಸಿ ಹದಿನೆಂಟು ವಿದೇಶಿಯರು ಸೇರಿದಂತೆ ಇಪ್ಪತ್ತು ಮಂದಿಯನ್ನು ಹತ್ಯೆ ಮಾಡಿದ್ದರು.
Next Story





