ದೇರಳಕಟ್ಟೆ: ಮನೆಯಿಂದ ಲಕ್ಷಾಂತರ ರೂ.ಕಳವು

ಕೊಣಾಜೆ, ಆ.27: ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಖಲೀಲ್ ಚಿಕನ್ ಸ್ಟಾಲ್‌ನ ಮಾಲಕ ಅಬ್ದುಲ್ ಕರೀಂ ಎಂಬವರ ಮನೆಗೆ ಕಳ್ಳರು ನುಗ್ಗಿ ಕಳ್ಳತನಗೈದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕರೀಂ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳರು 2.75ಲಕ್ಷ ರೂ. ಹಾಗೂ ವ್ಯಾಪಾರದ ಹಣವನ್ನು ದೋಚಿದ್ದಾರೆ. ಮನೆಮಂದಿಗೆ ಎಚ್ಚರವಾದಾಗ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





