ಯೆನೆಪೊಯ ವತಿಯಿಂದ ದಂತ ತಪಾಸಣಾ ಶಿಬಿರ

ಕೊಣಾಜೆ, ಆ.27: ಯೆನೆಪೊಯ ದಂತ ಕಾಲೇಜಿನ ಮಕ್ಕಳ ದಂತ ವಿಭಾಗ ಹಾಗೂ ನಾಟೆಕಲ್‌ನ ಮುಸ್ಲಿಂ ವಸತಿ ಶಾಲೆಯ ಸಹಕಾರದಲ್ಲಿ ದಂತ ತಪಾಸಣಾ ಶಿಬಿರವು ನಡೆಯಿತು.
ಮಕ್ಕಳ ದಂತ ವಿಭಾಗದ ಡಾ.ಶೈಲೇಶ್ ಶಣೈ, ದಂತ ಕಾಲೇಜಿನ ಸಂಯೋಜಕ ಭರತ್, ಮುಸ್ಲಿಂ ವಸತಿ ಶಾಲೆಯ ಪ್ರಾಂಶುಪಾಲ ಮುರುಗಯ ಮುಂತಾದವರು ಉಪಸ್ಥಿತರಿದ್ದರು. ಮಕ್ಕಳ ದಂತ ವಿಭಾಗದ ಮುಖ್ಯಸ್ಥ ಡಾ.ಶ್ಯಾಮ್.ಎಸ್.ಭಟ್ ಮಾರ್ಗದರ್ಶನದಲ್ಲಿ ತಪಾಸಣಾ ಶಿಬಿರ ನಡೆಯಿತು.
Next Story





