ಮಡಿಕೇರಿ: ಪೊಲೀಸ್ ದೂರುಗಳ ಪ್ರಾಧಿಕಾರ ರಚನೆ
ಮಡಿಕೇರಿ, ಆ.27: ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ ರಚನೆಯಾಗಿ, ಪದಾಧಿಕಾರಿಗಳನ್ನು ಹೊಂದಿದೆ. ಅಧ್ಯಕ್ಷರಾಗಿ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ-08272-225500, ಸದಸ್ಯ ಕಾರ್ಯದರ್ಶಿಯಾಗಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ-08272-2289000, ಸದಸ್ಯರಾಗಿ ಪುಟ್ಟಮಾದಯ್ಯ, ನಿವೃತ್ತ ಕೆ.ಎ.ಎಸ್. ಅಧಿಕಾರಿ(ಸೆಲೆಕ್ಷನ್‌ಗ್ರೇಡ್) ಮೈಸೂರು ಜಿಲ್ಲೆ-9481674999 ಹಾಗೂ ಸದಸ್ಯರಾಗಿ ಡಾ. ಪುಷ್ಪಾಕುಟ್ಟಣ್ಣ, ನಿವೃತ್ತ ಪ್ರಾಂಶುಪಾಲರು, ಹೊಸಕೇರಿ ಗ್ರಾಮ ಅರೆಕಾಡು ಅಂಚೆ, ಮಡಿಕೇರಿ-08272-230035 ಮತ್ತು 9845504537. ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿವೈಎಸ್ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಂತದಲ್ಲಿ ನಡೆದ ಸಾವು ತೀವ್ರ ಸ್ವರೂಪದ ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದಾಗಿದೆ. ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಹೊಂದಿರುವ ಅಧಿಕಾರ ಇಂತಿದೆ:
ಡಿವೈಎಸ್ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರ ದುರ್ನಡತೆ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ವಿಚಾರಣೆ. ಡಿವೈಎಸ್ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಯ ವಿರುದ್ಧದ ದೂರನ್ನು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸುವುದು. ನೇರವಾಗಿ ತೀವ್ರ ದುರ್ನಡತೆಯ ದೂರುಗಳನ್ನು ಸ್ವೀಕರಿಸಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಕಳುಹಿಸುವುದು. ಸಾರ್ವಜನಿಕರು ದೂರು ಸಲ್ಲಿಸಬೇಕಾದ ವಿಳಾಸ:
www.karnataka.gov.in/spca Àdpcamdc@karnataka.gov.in ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ-571201. ಹೆಚ್ಚುವರಿ ಡಿವೈಎಸ್ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ಮೇಲೆ ತಿಳಿಸಿದಂತೆ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ. ಅಧ್ಯಕ್ಷರು, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, ಕೊಠಡಿ ಸಂ.36 ನೆಲಮಹಡಿ, ವಿಕಾಸಸೌಧ, ಬೆಂಗಳೂರು 01. ದೂರವಾಣಿ 22386063, 22034220ನ್ನು ಸಂಪರ್ಕಿಸಬಹುದು. ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಸಾರ್ವಜನಿಕರಿಗಾಗಿ ವೆಬ್ ಸೈಟ್ ಪ್ರಾರಂಭಿಸಿದ್ದು ಆಗಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಕೊಡಗು ಜಿಲ್ಲೆಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಲ್ಲಿಸಬೇಕಾದ ದೂರುಗಳನ್ನು ಇ-ಮೇಲ್ ವಿಳಾಸ ಗೆ ನೇರವಾಗಿ ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.







