ಪೋಷಕರ ನಿರೀಕ್ಷೆ ಹುಸಿಗೊಳಿಸದಿರಿ: ನ್ಯಾ. ಪ್ರಕಾಶ್
ಅರಿವು ಕಾರ್ಯಾಗಾರ
.jpg)
ಸಾಗರ, ಆ.27: ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಂದುಕೊಂಡ ಗುರಿ ತಲುಪುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಗಮನ ಹರಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ.ಡಿ.ಪ್ರಕಾಶ್ ಹೇಳಿದರು.
ಇಲ್ಲಿನ ಎಂಡಿಎಫ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ಸೇವನೆ ವ್ಯಸನ ನಿರ್ಮೂಲನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆ ಹುಸಿಗೊಳಿಸುವ ಕೆಲಸ ಮಾಡಬಾರದು. ಪೋಷಕರು ಮಕ್ಕಳ ಕೈಗೆ ಹೆಚ್ಚಿನ ಹಣ ಕೊಟ್ಟು, ಅವರು ತಪ್ಪುದಾರಿ ತುಳಿಯದಂತೆ ನೋಡಿಕೊಳ್ಳಬೇಕು. ಹದಿಹರೆಯದಲ್ಲಿ ಕೆಟ್ಟ ವ್ಯಸನಕ್ಕೆ ತುತ್ತಾದರೆ ಭವಿಷ್ಯ ಭೀಕರವಾಗಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಕ್ಕಿಂತಲೂ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಮೆಸೇಜ್‌ಗಳ ವ್ಯಸನ ಮಾರಕ ವಾಗಿ ಪರಿಣಮಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ದೂರ ಇರಬೇಕು. ನೀವು ದುಡಿಯುವ ಹಂತಕ್ಕೆ ಬಂದಾಗ ನಿಮ್ಮ ಬೇಕುಬೇಡಗಳನ್ನು ಈಡೇರಿಸಿಕೊಳ್ಳಿ. ವಿದ್ಯಾರ್ಥಿನಿಯರು ಪ್ರೀತಿ, ಪ್ರೇಮದಿಂದ ದೂರವಿದ್ದು ಉತ್ತಮ ಬದುಕು ನಡೆಸು ವತ್ತ ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ತ್ಯಾಗಮೂರ್ತಿ ಮಾತನಾಡಿ, ಕಾನೂನು ಸೇವಾ ಸಮಿತಿ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಕಾನೂನು ಕಾರ್ಯಾಗಾರವನ್ನು ನಡೆಸುವ ಮೂಲಕ ಕಾನೂನಿನ ಸಾಮಾನ್ಯ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವರ್ಷಕ್ಕೆ ಇಂತಹ 30 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಎಂಡಿಎಫ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀನಂ
ದನರಾವ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಟ್ಟರಾಜು, ಸಹಾಯಕ ಸರಕಾರಿ ಅಭಿಯೋಜಕಿ ಬಿ.ಎಸ್.ಜ್ಯೋತಿ, ಎಂ.ಬಿ.ಗಿರೀಶಗೌಡ, ವಿನಯಕುಮಾರ್, ಅನಿಲಕುಮಾರ್ ಒಡೆಯರ್, ಕೆ.ಜಿ.ರಾಘವೇಂದ್ರ ಉಪಸ್ಥಿತರಿದ್ದರು.







