ಉದ್ಯಮಿಯ ದರೋಡೆ ಪ್ರಕರಣ: ಓರ್ವನ ಬಂಧನ
ಕಾಸರಗೋಡು, ಆ.27: ಇಲ್ಲಿನ ಉದ್ಯಮಿ ಯೋರ್ವರ 2.70 ಕೋ. ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.ಬಂಧಿತ ಆರೋಪಿಯನ್ನು ಕೂತುಪರಂಬದ ಎನ್.ಕೆ. ಮೃದುಲ್(23) ಎಂದು ಗುರುತಿಸಲಾಗಿದೆ. ಕೃತ್ಯ ದಲ್ಲಿ ಒಟ್ಟು ಹತ್ತು ಮಂದಿ ಶಾಮೀಲಾಗಿರುವು ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇದರ ಪ್ರಮುಖ ಆರೋಪಿ ಕಣ್ಣೂರು ಕೂತುಪರಂಬದ ರೆನಿಲ್ ಎನ್ನಲಾಗಿದೆ. ಆ.7ರಂದು ರಾತ್ರಿ ಕಾಸರಗೋಡು ಚೆರ್ಕಳ ಬಳಿ ಕಾರಿನಲ್ಲಿ ತೆರಳುತ್ತಿದ್ದ ಪುಣೆಯ ಸ್ವರ್ಣೋದ್ಯಮಿಗೆ ರಿವಾಲ್ವರ್ ತೋರಿಸಿ 2.70 ಕೋ. ರೂ. ಯನ್ನು ತಂಡ ದರೋಡೆ ನಡೆಸಿತ್ತು. ಆದರೆ ಘಟನೆಯ ಬಗ್ಗೆ ದೂರು ದಾಖಲಾದದ್ದು ಆ. 20ರಂದು ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಗಣೇಶ್ ಎಂಬವರ ದೂರಿನಂತೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪುಣೆಯಿಂದ ತಲಶ್ಯೇರಿಗೆ ಗಣೇಶ್ ಮತ್ತು ಗಿರೀಶ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಚೆರ್ಕಳಕ್ಕೆ ತಲುಪಿದಾಗ ಇನ್ನೊಂದು ಕಾರಿನಲ್ಲಿ ತಲಪಾಡಿಯಿಂದ ಬೆನ್ನಟ್ಟಿಕೊಂಡು ಬಂದ ತಂಡ ರಿವಾಲ್ವರ್ ತೋರಿಸಿ ನಗದು ದರೋಡೆ ಮಾಡಿ ಪರಾರಿಯಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಕೃತ್ಯದಲ್ಲಿ ಎಲ್ಲಾ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು, ಶೀಘ್ರವೇ ಇವರನ್ನು ಬಂಧಿಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೂತು ಪರಂಬದ ಸಯೂಜ್ ಮತ್ತು ಟಿಟ್ಟು ಎಂಬವರು ಈ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಮಾಹಿತಿ ಲಭಿಸಿದೆ. ಐದು ಮಂದಿಈ ಪ್ರಕರಣದಲ್ಲಿ ನೇರ ವಾಗಿ ಶಾಮೀಲಾಗಿದ್ದಾರೆಂದು ತಿಳಿದು ಬಂದಿದೆ.
ಮೃದುಲ್ಗೆ 20 ಲಕ್ಷ ರೂ. ಪ್ರತಿಫಲ ಲಭಿಸಿದೆ ಎನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ಲಭಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
5.26 ಕೋಟಿ ರೂ. ದರೋಡೆ ಆಗಿತ್ತು
ತಂಡವು 2.70 ಕೋ. ರೂ. ದರೋಡೆ ನಡೆಸಿದೆ ಎಂಬ ದೂರು ನೀಡಿದ್ದರೂ, ಒಟ್ಟು 5.26 ಕೋ. ರೂ. ದರೋಡೆ ಮಾಡಲಾಗಿದೆ ಎನ್ನಲಾಗಿದೆ.
ಆದರೆ ಉಳಿದ ಹಣಕ್ಕೆ ಸೂಕ್ತ ದಾಖಲೆಗಳಿಲ್ಲವೆನ್ನಲಾಗಿದೆ. ಹವಾಲ ಹಣವಾದುದರಿಂದ ಕೇವಲ 2.70 ಕೋ. ರೂ. ದರೋಡೆ ನಡೆಸಿರುವುದಾಗಿ ದೂರು ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಆಗುಂಬೆ ಘಾಟಿಯಲ್ಲಿ ಅಪಘಾತ: ಮೂವರಿಗೆ ಗಾಯ
ಹೆಬ್ರಿ, ಆ.27: ಆಗುಂಬೆ ಘಾಟಿಯ ಸೋಮೇಶ್ವರ 2ನೆ ಮತ್ತು 3ನೆ ತಿರುವಿನ ಮಧ್ಯೆ ಶುಕ್ರವಾರ ಸಂಜೆ ಅಪರಿಚಿತ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
ಹೆಬ್ರಿ ಕಡೆಯಿಂದ ಆಗುಂಬೆ ಕಡೆ ಹೋಗುತ್ತಿದ್ದ ಟಾಟಾ ಇಂಡಿಕಾ ಕಾರಿಗೆ ಆಗುಂಬೆ ಕಡೆಯಿಂದ ಬರುತ್ತಿದ್ದ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಕಾರಿನಲ್ಲಿದ್ದ ಚಾಲಕ ಗಣೇಶ, ವಿಶ್ವನಾಥ, ಪ್ರದೀಪ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







