ಬಸ್ರೂರು: ಹಕ್ಕುಪತ್ರಕ್ಕಾಗಿ ನಿವೇಶನರಹಿತರಿಂದ ಧರಣಿ

ಕುಂದಾಪುರ, ಆ.27: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಬಸ್ರೂರು ಗ್ರಾಪಂ ವ್ಯಾಪ್ತಿಯ ಮನೆ, ನಿವೇಶನ ರಹಿತರು ಭೂಮಿ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬಸ್ರೂರು ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದರು.
ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಂದಾಯ ಇಲಾಖೆ ಕುಂದಾಪುರ ತಾಲೂಕಿನಾದ್ಯಂತ ಶ್ರೀಮಂತರು ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರುವ 369.18 ಎಕ್ರೆ ಸರಕಾರಿ ಸ್ಥಳವನ್ನು ಈ ಕೂಡಲೇ ಹಿಂದೆ ಪಡೆದು ಬಡನಿವೇಶನ ರಹಿತರಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಗ್ರಾಪಂ ಅಧ್ಯಕ್ಷ ಸಂತೋಷ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ, ಸದಸ್ಯರಾದ ಮಹೇಶ, ದಿನಕರ ಶೆಟ್ಟಿ, ಮಲ್ಲಿಕಾರ್ಜುನರಿಗೆ ಸಲ್ಲಿಸಲಾಯಿತು. ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ,ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಗೋಪಾಲ ಶೆಟ್ಟಿಗಾರ್, ಬಾಬು ಬಳ್ಕೂರು, ಬೋಜ ಶೆಟ್ಟಿಗಾರ, ಗಣಪತಿ ಶೇಟ್ ಕೋಣಿ, ರಮೇಶ ಪೂಜಾರಿ ಗುಲ್ವಾಡಿ, ಜನಪರ ವೇದಿಕೆಯ ನಾಗರಾಜ ಕಂಡ್ಲೂರು, ನಾಗರತ್ನಾ ನಾಡ, ಕೆ.ಶಂಕರ್ ಮತ್ತಿತರರು ಉಪಸ್ಥಿತರಿದ್ದರು.





