ಉದ್ಘಾಟನೆಗೆ ಮುನ್ನವೇ ಸೋರುತಿಹುದು ಅಕ್ಷರ ದಾಸೋಹ ಕಟ್ಟಡ!

ಕಾರ್ಕಳ, ಆ.27 ಇಲ್ಲಿನ ಬಂಗ್ಲೆಗುಡ್ಡೆ ಸದ್ಭಾವನ ನಗರದ ಸ.ಹಿ.ಪ್ರಾ ಶಾಲೆ ಯಲ್ಲಿ ಅಕ್ಷರ ದಾಸೋಹ ಕೋಣೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಇದೀಗ ಕಟ್ಟಡದ ಮೇಲ್ಛಾವಣಿ ಸೋರ ಲಾರಂಭಿಸಿದ್ದು, ಕಳಪೆ ಕಾಮಗಾರಿ ನಡೆ ದಿದೆ ಎಂಬ ಆರೋಪ ಕೇಳಿಬಂದಿದೆ.
ಉಡುಪಿ ಜಿಪಂ ವತಿಯಿಂದ 2013-14ನೆ ಸಾಲಿನ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ 2015-16ನೆ ಸಾಲಿನಲ್ಲಿ 3.31 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. ಅದರ ಅಡಿಪಾಯದಲ್ಲಿ ಹಲವು ಲೋಪದೋಷಗಳು ಕಂಡುಬಂದಿತ್ತು. ಆ.28ರಂದು ಇಲ್ಲಿನ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಅಕ್ಷರ ದಾಸೋಹ ಕೋಣೆಯ ಉದ್ಘಾಟನೆಗೊಳ್ಳಬೇಕಿದೆ. ಆದ್ದರಿಂದ ತರಾತುರಿಯಲ್ಲಿ ಕಾಮಗಾರಿ ಯನ್ನು ನಡೆಸಿದ್ದೇ ಇದೀಗ ಕಟ್ಟಡದ ಮೇಲ್ಛಾವಣಿಯ ಸೋರಿಕೆಗೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖಾ ಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಕಟ್ಟಡದ ಉದ್ಘಾಟನೆಗೆ ಅವಕಾಶ ನೀಡಲಾರೆವು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.





