ಭೂಕಂಪದಿಂದ ತತ್ತರಿಸಿದ ಇಟಲಿಯಲ್ಲಿ ಸರಣಿ ಪಶ್ಚಾತ್ ಕಂಪನಗಳು

ಅಸ್ಕೋಲಿ ಪಿಸನೊ (ಇಟಲಿ), ಆ. 27: ಭೂಕಂಪದಿಂದ ತತ್ತರಿಸಿರುವ ಇಟಲಿಯ ಪಟ್ಟಣಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಪಶ್ಚಾತ್ ಕಂಪನಗಳು ಸಂಭವಿಸಿದವು. ಅವುಗಳ ಪೈಕಿ ಪ್ರಬಲ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟಿತ್ತು. ಶನಿವಾರ ಇಟಲಿಯಲ್ಲಿ ರಾಷ್ಟ್ರೀಯ ಶೋಕಾಚರಣೆ ನಡೆಯಿತು. ಅಸ್ಕೋಲಿ ಪಿಸನೊದಲ್ಲಿ ಭೂಕಂಪದಲ್ಲಿ ಮೃತಪಟ್ಟ ಕೆಲವರಿಗೆ ಸರಕಾರಿ ಅಂತ್ಯ ಸಂಸ್ಕಾರ ನಡೆಸಲಾಗುವುದು. ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ಮ್ಯಾಟಿಯೊ ರೆಂಝಿ ಮತ್ತು ಅಧ್ಯಕ್ಷ ಸರ್ಗಿಯೊ ಮ್ಯಾಟರೆಲ ಹಾಜರಿರುವರು. ಬುಧವಾರ ಮುಂಜಾನೆ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 281 ಮಂದಿ ಮೃತಪಟ್ಟಿದ್ದಾರೆ ಹಾಗೂ 387 ಮಂದಿ ಗಾಯಗೊಂಡಿದ್ದಾರೆ.
Next Story





