ಟರ್ಕಿ: 3 ಮಾಜಿ ರಾಜತಾಂತ್ರಿಕರ ಸೆರೆ
ಇಸ್ತಾಂಬುಲ್, ಆ. 27: ಟರ್ಕಿಯಲ್ಲಿ ಕಳೆದ ತಿಂಗಳು ನಡೆದ ವಿಫಲ ಸೇನಾ ದಂಗೆಯಲ್ಲಿ ಪಾತ್ರ ವಹಿಸಿದ್ದರು ಎಂಬ ಆರೋಪದಲ್ಲಿ ಮೂವರು ಮಾಜಿ ಉನ್ನತ ರಾಜತಾಂತ್ರಿಕರನ್ನು ಶನಿವಾರ ಬಂಧಿಸಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಧರ್ಮ ಗುರು ಫತೇವುಲ್ಲಾ ಗುಲೇನ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಅವರಿಗೆ ಅಂಕಾರದ ನ್ಯಾಯಾಲಯವೊಂದು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತರ ಪೈಕಿ ಓರ್ವರಾಗಿರುವ ಗುರ್ಕಾನ್ ಬಲಿಕ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಗುಲ್‌ರ ಪ್ರಧಾನ ವಿದೇಶ ನೀತಿ ಸಲಹಾಕಾರರಾಗಿದ್ದರು. ಗುಲ್ 2007ರಿಂದ 2014ರವರೆಗೆ ಅಧ್ಯಕ್ಷರಾಗಿದ್ದರು. ಆ ಬಳಿಕ ರಿಸೆಪ್ ತಯ್ಯಿಪ್ ಎರ್ದೊಗಾನ್‌ರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದರು.
Next Story





