ಬೀದಿನಾಯಿ ಉಪಟಳ: ಪ್ರಶಾಂತ್ ಭೂಷಣ್‌ಗೆ ಉತ್ತರಿಸಿದ ಪಿಣರಾಯಿ ವಿಜಯನ್

ತಿರುವನಂತಪುರಂ,ಆಗಸ್ಟ್ 28: ಬೀದಿನಾಯಿ ಸಮಸ್ಯೆಗೆ ಸಂಬಂಧಿಸಿ ಪ್ರಶಾಂತ್ ಭೂಷಣ್‌ರ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರ ನೀಡಿದ್ದಾರೆ. ಕೇರಳದಾದ್ಯಂತ ನಾಯಿಗಳನ್ನು ಕೊಂದುಹಾಕಲಾಗುತ್ತಿದೆ ಎಂಬ ರೀತಿಯ ಮಾಧ್ಯಮ ವರದಿಗಳು ತಮ್ಮಂತಹ ಪ್ರಮುಖ ವ್ಯಕ್ತಿಯನ್ನು ಪ್ರಭಾವಿಸಿದ್ದು ದುದೃಷ್ಟಕರವಾಗಿದೆ. ಬೀದಿನಾಯಿಗಳನ್ನು ಕೊಲ್ಲುವ ಕುರಿತು ಯಾವುದೇ ಚರ್ಚೆನಡೆದಿಲ್ಲ. ಮನುಷ್ಯರು ಮತ್ತು ಪ್ರಾಣಿಗಳ ಜೀವಕ್ಕೆ ಬೆಲೆ ನೀಡಲಾಗುವುದು. ಕಾನೂನಿನ ಮಿತಿಯಲ್ಲಿ ಬೀದಿನಾಯಿಗಳನ್ನು ಜಂಜೆತನದ ಔಷಧ ನೀಡುವುದು ಸರಕಾರದ ನಿರ್ಧಾರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಪತ್ರ ಹೀಗಿದೆ:
ಜನಜೀವನಕ್ಕೆ ಮಾರಕವಾಗಿ ಪರಿಣಮಿಸಿರುವ ಬೀದಿ ನಾಯಿಗಳ ಉಪಟಳವನ್ನು ನಿವಾರಿಸಲು ಕೇರಳ ಸರಕಾರ ಕೈಗೊಳ್ಳುವ ಕ್ರಮಗಳ ಕುರಿತು ತಮ್ಮ ಪರಾಮರ್ಶೆ ಆಶ್ಚರ್ಯ ತರಿಸಿದೆ. ಕೇರಳಾದ್ಯಂತ ಒಂದೂ ಬಿಡದೆ ಎಲ್ಲಾ ನಾಯಿಗಳನ್ನು ಕೊಲ್ಲಲಾಗುತ್ತದೆ ಎಂಬಂತೆ ಬಿಂಬಿಸುವ ಮಾಧ್ಯಮ ವರದಿಗಳಿಗೆ ತಮ್ಮಂತಹ ಪ್ರಮುಖ ವ್ಯಕ್ತಿಯೊಬ್ಬರು ಪ್ರಭಾವಕ್ಕೊಳಗಾದ್ದು ದುರದೃಷ್ಟಕರವಾಗಿದೆ. ಆದರೆ ನಿಜಸ್ಥಿತಿ ಇದಲ್ಲ ಎಂದು ತಮಗೆ ತಿಳಿಸಲು ನಾನು ಬಯಸಿದ್ದೇನೆ. ಬೀದಿನಾಯಿ ಉಪಟಳವನ್ನು ಎದುರಿಸಲು ಸಂಬಂಧಿಸಿದ ಖಾತೆಯ ಒಂದು ಸಭೆ ಕರೆಯಲಾಗಿತ್ತು ಎಂಬುದು ನಿಜವಾಗಿದೆ. ನಾಯಿಗಳನ್ನು ಕೊಲ್ಲುವ ಕುರಿತು ಯಾವ ಚರ್ಚೆಯೂ ಈಸಭೆಯಲ್ಲಿ ಆಗಿಲ್ಲ. ಓರ್ವ ಹಿರಿಯ ಮಹಿಳೆಯನ್ನು ಬೀದಿನಾಯಿ ಕಚ್ಚಿಕೋಂದಿರುವ ಘಟನೆಯ ಬಳಿಕ ಈ ಸಭೆಯಲ್ಲಿ ಅಪಾಯಕಾರಿ ನಾಯಿಗಳಿಗೆ ಸೆಪ್ಟಂಬರ್ ಮೂರರಿಂದ ಬಂಜೆಗೊಳಿಸುವ ಮದ್ದು ನೀಡಲು ತೀರ್ಮಾನಿಸಲಾಗಿತ್ತು.ಕಾನೂನು ಮಿತಿಯಲ್ಲಿ ಎಲ್ಲ ಎಚ್ಚರಿಕೆಗಳೊಂದಿಗೆ ತರಬೇತಿ ಪಡೆದ ಪ್ರಾಣಿವೈದ್ಯರು ಬಂಜೆಗೊಳಿಸುವ ಚಿಕಿತ್ಸೆ ನೀಡಬೇಕೆಂದು ತೀರ್ಮಾನಿಸಲಾಗಿದೆ.
1960ರ ಪ್ರಿವೆನ್ಶನ್ ಆಫ್ ಕ್ರೂಯಿಲ್ಟಿ ಟು ಎನಿಮಲ್ಸ್ ಎಂಬ ಕಾನೂನಿನ್ವಯವೇ ಈ ಸಮಗ್ರ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಮೇಲ್ನೋಟದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯವಿರುವ ವೈದ್ಯರನ್ನು ಗುತ್ತೆಯಾಧಾರದಲ್ಲಿ ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮಾಲಿನ್ಯ ನಿರ್ಮೂಲನಕ್ಕಾಗಿ ಒಂದು ಯೋಜನೆಯನ್ನು ಕೂಡಾ ಬೀದಿನಾಯಿ ಉಪಟಳ ಕಡಿಮೆಗೊಳಿಸುವ ನಿಟ್ಟಿನಲ್ಲಿ ತಯಾರಿಸಲಾಗಿದೆ.ಬೀದಿನಾಯಿಗಳ ಕುರಿತು ಪೇಯ್ಡಿ ವರದಿಗಳಾಗುತ್ತಿವೆ ಎಂಬ ತಮ್ಮ ಅಭಿಪ್ರಾಯ ನ್ಯಾಯೋಚಿತವಲ್ಲ. ಅವು ಬೋಗಸ್ ವರದಿಗಳಲ್ಲ. ಕಳೆದ ಒಂದೆರಡು ತಿಂಗಳ ಕೇರಳದ ಪತ್ರಿಕೆಗಳನ್ನು ಪರಿಶೀಲಿಸಿದರೆ ಈ ಬಗ್ಗೆ ನಿಮಗೆ ಅರಿಯಲಿದೆ. ಕೇರಳದಾದ್ಯಂತ ಜನರು ಬೀದಿನಾಯಿಗಳಿಗೆ ಭಯಭೀತರಾಗಿದ್ದಾರೆ. ತಿರುವನಂತಪುರ ನೆಯ್ಯಾಟಿಕರೆಯಲ್ಲಿ ಓರ್ವ ಬಡ ಮಹಿಳೆಯನ್ನು ಬೀದಿನಾಯಿಗಳು ಅತೀ ಭಯಾನಕವಾಗಿ ಆಕ್ರಮಿಸಿ ಕೊಂದು ಹಾಕಿದೆ. ಬೀದಿನಾಯಿಗಳಲ್ಲಿ ಸಂತತಿ ಬೇಗನೆ ಹೆಚ್ಚುತ್ತಿವೆ. ನಾಯಿಗುಂಪುಗಳು ಅಕ್ರಮಾಸಕ್ತಮತ್ತು ಉಪದ್ರವಕಾರಿಯಾದ್ದರಿಂದ ರಾತ್ರಿಯಲ್ಲಿ ಕೂಡಾ ಜನರು ಅದಕ್ಕೆ ಹೆದರಿ ಹೊರಗಿಳಿಯದ ಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆ ಪರಿಹರಿಸುವುದಕ್ಕಾಗಿ ಒಂದು ಕಾನೂನು ನಿರ್ಮಿಸುವ ಚಿಂತನೆ ನಡೆಸಲಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ಜೀವಕ್ಕೆ ಬೆಲೆಕಲ್ಪಿಸಿ, 1960ರ ಕಾನೂನು, 2015ರ ನವೆಂಬರ್ ಮತ್ತು 2016 ಮಾರ್ಚ್‌ನ ಸುಪ್ರೀಂಕೋರ್ಟ್ ತೀರ್ಪು ಮುಂದಿಟ್ಟು ಕಾನೂನು ರಚಿಸಲು ಸರಕಾರ ಉದ್ದೇಶಿಸಿದೆ.
ಈ ವಿಷಯದಲ್ಲಿ ಕೇರಳದಲ್ಲಿ ಅಹಿತಕರವಾದದ್ದೇನು ನಡೆಯುತ್ತಿಲ್ಲ ಎಂದು ತಮಗೆ ತಿಳಿಸಲು ಹಾಗೂ ವಿಷಯದ ನಿಜಸ್ಥಿತಿ ತಮಗೆ ತಿಳಿಸಲು ಈ ಪತ್ರ ಬರೆದಿದ್ದೇನೆ.







