ಟ್ರಂಪ್‌ರ ‘ಮೆಕ್ಸಿಕೊ ಗೋಡೆ’ ಎಷ್ಟು ವಾಸ್ತವಿಕ?

ವಾಶಿಂಗ್ಟನ್, ಆ. 28: ಡೊನಾಲ್ಡ್ ಟ್ರಂಪ್ ತನ್ನ ಆಕ್ರಮಣಕಾರಿ ವಲಸಿಗ ವಿರೋಧಿ ಧೋರಣೆಯಲ್ಲಿ ಸ್ವಲ್ಪ ರಿಯಾಯಿತಿ ತೋರಿಸಿದಂತೆ ಕಂಡರೂ, ಅಲ್ಪಸಂಖ್ಯಾತರನ್ನು ತಲುಪಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಅನಿಸಿದರೂ, ತನ್ನ ಒಂದು ಚುನಾವಣಾ ಭರವಸೆಯಿಂದ ಮಾತ್ರ ಕೊಂಚವೂ ಹಿಮ್ಮೆಟ್ಟಿಲ್ಲ. ಅದೆಂದರೆ ಮೆಕ್ಸಿಕೊದೊಂದಿಗೆ ಅಮೆರಿಕ ಹೊಂದಿರುವ ಗಡಿಯಲ್ಲಿ ಗೋಡೆಯೊಂದನ್ನು ಕಟ್ಟುವುದು!
‘‘ಅಕ್ರಮ ವಲಸೆಯನ್ನು ನಿಲ್ಲಿಸಲು, ಪಾತಕಿ ಗುಂಪುಗಳು ಮತ್ತು ಅವುಗಳ ಹಿಂಸೆಯನ್ನು ಹತ್ತಿಕ್ಕಲು ಹಾಗೂ ನಮ್ಮ ದೇಶದೊಳಗೆ ಮಾದಕವಸ್ತು ಹರಿದು ಬರುವುದನ್ನು ತಡೆಯಲು ನಾವು ಬೃಹತ್ ಗೋಡೆಯೊಂದನ್ನು ನಿರ್ಮಿಸಲಿದ್ದೇವೆ’’ ಎಂದಿದ್ದಾರೆ.ದರೆ, ಈ ಕಲ್ಪನೆ ಅವಾಸ್ತವಿಕವಾಗಿದ್ದು, ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪರಿಣತರು ಹೇಳುತ್ತಾರೆ.ಮೆರಿಕ-ಮೆಕ್ಸಿಕೊ ಗಡಿ ಅಟ್ಲಾಂಟಿಕ್ ಸಮುದ್ರದಿಂದ ಪೆಸಿಫಿಕ್ ಸಮುದ್ರದವರೆಗೆ 3,200 ಕಿಲೋಮೀಟರ್ ಉದ್ದವಿದೆ. ಈ ವ್ಯಾಪ್ತಿಯಲ್ಲಿ ಒಣ ಪ್ರದೇಶಗಳು, ಜನ ವಿರಳ ಪ್ರದೇಶಗಳು ಮತ್ತು ಜನದಟ್ಟಣೆಯ ನಗರ ಪ್ರದೇಶಗಳು ಬರುತ್ತವೆ. ಮೊದಲು ಗಡಿಯುದ್ದಕ್ಕೂ ಗೋಡೆ ಕಟ್ಟಬೇಕು ಎನ್ನುತ್ತಿದ್ದ ಟ್ರಂಪ್, ಈಗ ಅರ್ಧ ಸಾಕು, ಉಳಿದ ಭಾಗದಲ್ಲಿ ಭೌಗೋಳಿಕ ರಚನೆಯೇ ನೈಸರ್ಗಿಕ ತಡೆಗೋಡೆಯಾಗಿದೆ ಎನ್ನುತ್ತಾರೆ.ದರೆ, ಗೋಡೆಯ ಎತ್ತರ ಎಷ್ಟು ಇರಬೇಕು ಎನ್ನುವ ಬಗ್ಗೆ ಅವರಲ್ಲಿ ಸ್ಪಷ್ಟತೆಯಿಲ್ಲ. 35 ಅಡಿ, 40 ಅಡಿ, 55 ಅಡಿ ಹಾಗೂ ಒಂದು ಕಡೆ 90 ಅಡಿ ಎಂದೂ ಹೇಳುತ್ತಾ ಬಂದಿದ್ದಾರೆ.
ಮೊದಲ ದಿನವೇ ಅಕ್ರಮ ವಲಸಿಗರನ್ನು ಹೊರದಬ್ಬುವೆ: ಟ್ರಂಪ್
ವಾಶಿಂಗ್ಟನ್, ಆ. 28: ತಾನು ಅಮೆರಿಕದ ಮುಂದಿನ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಕ್ರಮ ವಲಸಿಗರನ್ನು ಹೊರಗಟ್ಟಲು ಆರಂಭಿಸುತ್ತೇನೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಶನಿವಾರ ಪಣ ತೊಟ್ಟಿದ್ದಾರೆ.
‘‘ನನ್ನ ಅಧಿಕಾರಾವಧಿಯ ಮೊದಲ ದಿನದಂದೇ ಅಕ್ರಮ ವಲಸಿಗರನ್ನು ಈ ದೇಶದಿಂದ ಹೊರಗಟ್ಟುವ ಕೆಲಸವನ್ನು ನಾನು ಆರಂಭಿಸುತ್ತೇನೆ. ಇದರಲ್ಲಿ ಒಬಾಮ-ಕ್ಲಿಂಟನ್ ಆಡಳಿತದಲ್ಲಿ ಅಮೆರಿಕಕ್ಕೆ ಬಂದ ಲಕ್ಷಾಂತರ ಅಕ್ರಮ ವಲಸಿಗರೂ ಸೇರಿದ್ದಾರೆ’’ ಎಂದು ಅಯೋವ ರಾಜ್ಯದ ಡೆಸ್ ಮೊಯಿನ್ಸ್ ನಲ್ಲಿ ಟ್ರಂಪ್ ಹೇಳಿದರು.
ಅಧ್ಯಕ್ಷ ಬರಾಕ್ ಒಬಾಮರ ಮೊದಲ ಅವಧಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು.
"ಅಮೆರಿಕದ ಮುಂದಿನ ಅಧ್ಯಕ್ಷರು ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಾನು ಬೃಹತ್ ಗಡಿ ಗೋಡೆಯೊಂದನ್ನು ಕಟ್ಟುತ್ತೇನೆ, ರಾಷ್ಟ್ರವ್ಯಾಪ್ತಿಯ ಇ-ತಪಾಸಣೆ ವ್ಯವಸ್ಥೆಯೊಂದನ್ನು ರೂಪಿಸುತ್ತೇನೆ, ಅಕ್ರಮ ವಲಸಿಗರು ಕಲ್ಯಾಣ ಮತ್ತು ನೆರವು ಯೋಜನೆಗಳ ಪ್ರಯೋಜನ ಪಡೆಯುವುದನ್ನು ನಿಲ್ಲಿಸುತ್ತೇನೆ ಹಾಗೂ ತಮ್ಮ ವೀಸಾ ಅವಧಿ ಮೀರಿ ವಾಸಿಸುವವರನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಹೊರದಬ್ಬಲು ನಿರ್ಗಮನ-ಪ್ರವೇಶ ನಿಗಾ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುತ್ತೇನೆ’’ ಎಂದು ಟ್ರಂಪ್ ಎಚ್ಚರಿಸಿದರು.ವಧಿ ಮೀರಿದ ವೀಸಾದಾರರನ್ನು ಹೊರದಬ್ಬಲು ನಾವು ಕ್ರಮ ತೆಗೆದುಕೊಳ್ಳದಿದ್ದರೆ, ನಾವು ತೆರೆದ ಗಡಿಯನ್ನು ಹೊಂದಿದಂತೆ, ಅಷ್ಟೆ’’ ಬಿಲಿಯಾಧೀಶ ರಿಯಲ್ ಎಸ್ಟೇಟ್ ಉದ್ಯಮಿ ಹೇಳಿದರು.
ಅಗಾಧ ಖರ್ಚು ಮಾಡುವವರು ಯಾರು?
ಇದಕ್ಕೆ ತಗಲುವ ಖರ್ಚಿನ ಬಗ್ಗೆಯೂ ಅವರಲ್ಲಿ ಖಚಿತ ಲೆಕ್ಕವಿಲ್ಲ. ಒಂದೊಂದು ಕಡೆ ಒಂದೊಂದು ಹೇಳ್ತಾರೆ- 400 ಕೋಟಿ ಡಾಲರ್, ‘‘600 ಅಥವಾ 700 ಕೋಟಿ ಡಾಲರ್, ‘‘ಬಹುಶಃ 800 ಕೋಟಿ ಡಾಲರ್’’, ‘‘1000, ಬಹುಶಃ 1200 ಕೋಟಿ ಡಾಲರ್’’. ಅಂತಿಮವಾಗಿ ಸುಮಾರು 1000 ಕೋಟಿ ಡಾಲರ್‌ನಲ್ಲಿ ನಿಲ್ಲುತ್ತಾರೆ.
""ನೆಲದಿಂದ 40 ಅಡಿ ಮೇಲೆ ಮತ್ತು 10 ಅಡಿ ಕೆಳಗೆ ಚಾಚಿರುವ ಕಾಂಕ್ರಿಟ್ ಗೋಡೆಗೆ ಕನಿಷ್ಠ 2,600 ಕೋಟಿ ಡಾಲರ್ (ಸುಮಾರು 1,74,564 ಕೋಟಿ ರೂಪಾಯಿ) ವೆಚ್ಚ ತಗಲುತ್ತದೆ ಎಂದು ಟೆಕ್ಸಾಸ್‌ನ ಗೋಡೆ ಪರಿಣತ ಟಾಡ್ ಸ್ಟರ್ನ್ ಫೀಲ್ಡ್ ಹೇಳುತ್ತಾರೆ.ದರೆ, ಚೀನಾದ ಮಹಾಗೋಡೆಯ ಉದಾಹರಣೆಯನ್ನು ನೀಡಿ ಟ್ರಂಪ್ ತನ್ನ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಾರೆ.ವರಲ್ಲಿ ಕ್ರೇನ್‌ಗಳಿರಲಿಲ್ಲ. ಅವರಲ್ಲಿ ಭೂಮಿ ಅಗೆಯುವ ಉಪಕರಣಗಳಿರಲಿಲ್ಲ. ಈಗ ನಾವು ಕಟ್ಟಬೇಕಾಗಿರುವುದು 1,000 ಮೈಲಿ ಉದ್ದದ ಗೋಡೆ ಹಾಗೂ ನಮ್ಮಲ್ಲಿ ಎಲ್ಲವೂ ಇವೆ’’.
ಆದರೆ, ಈ ಹೋಲಿಕೆಗೆ ಯಾವ ಅರ್ಥವೂ ಇಲ್ಲ. ಚೀನಾದ ಮಹಾಗೋಡೆಯ ವಿವಿಧ ಭಾಗಗಳನ್ನು ಶತಮಾನಗಳ ಅಂತರದಲ್ಲಿ ಹಾಗೂ ಈಗ ಊಹಿಸಲೂ ಅಸಾಧ್ಯವಾದ ಮಾನವ ವೆಚ್ಚದಲ್ಲಿ ನಿರ್ಮಿಸಲಾಗಿದೆ.
31 ಅಡಿಯ ಏಣಿಗಳಿಗೆ ಒಳ್ಳೆ ಮಾರುಕಟ್ಟೆ!
‘‘ನೀವು 30 ಅಡಿ ಉದ್ದದ ಗೋಡೆಯನ್ನು ನಿರ್ಮಿಸುತ್ತೀರಾದರೆ, ಅದು 31 ಅಡಿ ಉದ್ದದ ಏಣಿಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ’’ ಎಂದು ಕಾಮಿಡಿಯನ್ ಜಾನ್ ಒಲಿವರ್ ಹೇಳುತ್ತಾರೆ.







