ಇಂಡೋನೇಶ್ಯದಲ್ಲಿ 145 ವರ್ಷದ ವ್ಯಕ್ತಿ
ಬಹುಶಃ ಜಗತ್ತಿನ ಸಾರ್ವಕಾಲಿಕ ಅತಿ ಹಿರಿಯ ಮನುಷ್ಯ

ಲಂಡನ್, ಆ. 28: ತನಗೆ 145 ವರ್ಷವಾಗಿದೆ ಎಂದು ಇಂಡೋನೇಶ್ಯದ ವ್ಯಕ್ತಿಯೊಬ್ಬರು ಹೇಳಿಕೊಳ್ಳುತ್ತಿದ್ದು, ಅದು ನಿಜವಾದರೆ ಅವರು ಈ ಜಗತ್ತಿನ ಸಾರ್ವಕಾಲಿಕ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.
ಇಂಡೋನೇಶ್ಯದ ಅಧಿಕಾರಿಗಳು ಮಾನ್ಯ ಮಾಡಿರುವ ದಾಖಲೆಗಳ ಪ್ರಕಾರ, ಮಧ್ಯ ಜಾವಾದ ಸ್ರಾಗೆನ್ ನಿವಾಸಿ ಮಬಹ ಗೋತೊ ಅವರು ಹುಟ್ಟಿದ್ದು 1870 ಡಿಸೆಂಬರ್ 31.
""®ದಾಖಲೆಯು ನಿಜವಾದರೆ, ಗೋತೊ ಜಗತ್ತಿನ ಪ್ರಮಾಣಿತ ಅತಿ ಹಿರಿಯ ವ್ಯಕ್ತಿಯಿಂದ ತುಂಬಾ ದೊಡ್ಡವರಾಗುತ್ತಾರೆ. ಈ ದಾಖಲೆಯು ಈಗ ಫ್ರಾನ್ಸ್‌ನ ಜೀನ್ ಕಾಲ್ಮಂಟ್ ಹೆಸರಿನಲ್ಲಿದೆ. ಅವರು 122 ವರ್ಷಗಳ ಕಾಲ ಬದುಕಿದ್ದರು.ೋತೊ ಅವರ ಎಲ್ಲ 10 ಸಹೋದರ ಸಹೋದರಿಯರು, ನಾಲ್ವರು ಹೆಂಡಂದಿರು, ಎಲ್ಲ ಮಕ್ಕಳು ನಿಧನರಾಗಿದ್ದಾರೆ. ಅವರ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳ ಮಕ್ಕಳು ಬದುಕಿದ್ದಾರೆ ಎಂದು ‘ದ ಸನ್’ ವರದಿ ಮಾಡಿದೆ.ದಾಗ್ಯೂ, ಈ ಅತಿ ಹಿರಿಯ ಮನುಷ್ಯ ಸಾವನ್ನು ಎದುರು ನೋಡುತ್ತಿದ್ದಾರೆ. ಅವರು 20 ವರ್ಷಗಳ ಹಿಂದೆಯೇ ತನ್ನ ಸಮಾಧಿ ಕಲ್ಲನ್ನು ಖರೀದಿಸಿ ಇಟ್ಟಿದ್ದಾರೆ.ಾನು ಸಾಯಲು ಬಯಸುತ್ತಿದ್ದೇನೆ. ನನ್ನ ಮೊಮ್ಮಕ್ಕಳು ಈಗ ಸ್ವತಂತ್ರವಾಗಿ ಬದುಕುತ್ತಿದ್ದಾರೆ’’ ಎಂದು ಅವರು ಹೇಳಿದರು.ವರು ಜಗತ್ತಿನ ‘ಸಾರ್ವಕಾಲಿಕ ಅತ್ಯಂತ ಹಿರಿಯ ವ್ಯಕ್ತಿ’ಯಾಗಿ ದಾಖಲಾಗುತ್ತಾರೋ ಇಲ್ಲವೋ ಎನ್ನುವುದು ಅನಿಶ್ಚಿತ. ಯಾಕೆಂದರೆ, ಅವರ ದಾಖಲೆಯನ್ನು ಸ್ವತಂತ್ರವಾಗಿ ಈಗಲೂ ಪರಿಶೀಲನೆ ನಡೆಸಲಾಗಿಲ್ಲ.ಳೆದ ಮೂರು ತಿಂಗಳಲ್ಲಿ ಗೋತೊರಿಗೆ ಚಮಚದ ಮೂಲಕ ಆಹಾರ ನೀಡಲಾಗುತ್ತಿದೆ. ಅವರು ನಿತ್ರಾಣರಾಗಿದ್ದು ಅವರಿಗೆ ಬೇರೆಯವರು ಸ್ನಾನ ಮಾಡಿಸಬೇಕಾಗಿದೆ.ವರು ಹೆಚ್ಚಿನ ಸಮಯ ಕುಳಿತುಕೊಂಡು ರೇಡಿಯೊ ಕೇಳುತ್ತಾರೆ ಎಂದು ಗೋತೊ ಅವರ ಮೊಮ್ಮಕ್ಕಳು ಹೇಳುತ್ತಾರೆ. ಅವರ ದೀರ್ಘಾಯುಷ್ಯದ ಗುಟ್ಟು ‘ತಾಳ್ಮೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.





