ಲೋಕಾಯುಕ್ತ ಕಾರ್ಯ ನಿರ್ವಹಣೆಯಿಂದ ಕೆರಳಿದ ಉಚ್ಚ ನ್ಯಾಯಾಲಯ
ನಿಂದನೆ ಕ್ರಮದ ಎಚ್ಚರಿಕೆ
ಮುಂಬೈ,ಆ.28: ಮಹಾರಾಷ್ಟ್ರ ಲೋಕಾಯುಕ್ತದ ಕಾರ್ಯ ನಿರ್ವಹಣೆಯ ನಿರಂಕುಶ ರೀತಿಗೆ ಆಘಾತವನ್ನು ವ್ಯಕ್ತಪಡಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು, ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಫಲಗೊಂಡರೆ ನ್ಯಾಯಾಂಗ ನಿಂದನೆ ನೋಟಿಸನ್ನು ಹೊರಡಿಸುವುದಾಗಿ ಲೋಕಾಯುಕ್ತ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿದೆ.
ಪ್ರಕರಣವೊಂದರಲ್ಲಿ ವಿಚಾರಣೆಯನ್ನು ನಡೆಸದಂತೆ ಮತ್ತು ಯಾವುದೇ ಆದೇಶಗಳನ್ನು ಹೊರಡಿಸದಂತೆ ಉಚ್ಚ ನ್ಯಾಯಾಲಯದ ನಿರ್ದೇಶವಿದ್ದರೂ ಲೋಕಾಯುಕ್ತ ಎಂ.ಎಲ್.ತಹಲಿಯಾನಿ ಅವರು ಅದನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಮಾಹಿತಿ ನ್ಯಾಯಮೂರ್ತಿಗಳಾದ ವಿ.ಎಂ.ಕಾನಡೆ ಮತ್ತು ಶಾಲಿನಿ ಫನ್ಸಾಳಕರ್-ಜೋಶಿ ಅವರ ವಿಭಾಗೀಯ ಪೀಠವನ್ನು ಕೆರಳಿಸಿತ್ತು.ಪನಗರ ಬಾಂದ್ರಾದಲ್ಲಿನ ಶಿಥಿಲಗೊಂಡಿರುವ ಕಟ್ಟಡದ ನಿವಾಸಿಗಳ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ಮಹಾರಾಷ್ಟ್ರ ವಸತಿ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶಿಸಿ ಲೋಕಾಯುಕ್ತದ ಆದೇಶವನ್ನು ಪ್ರಶ್ನಿಸಿ ‘ದಿ ಮಿಡ್ಲ್ ಇನ್‌ಕಂ ಗ್ರುಪ್ ಕೋ-ಆಪ್ ಹೌಸಿಂಗ್ ಸೊಸೈಟಿ ಬಾಂದ್ರಾ ಈಸ್ಟ್ ಗ್ರೂಪ್ ಲಿ.’ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ.ಾನೂನಿನಂತೆ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ತಮ್ಮನ್ನು ತೆರವುಗೊಳಿಸಲಾಗುತ್ತಿದೆ ಎಂದು ಕಟ್ಟಡದ ಕೆಲವು ನಿವಾಸಿಗಳು ದೂರು ಸಲ್ಲಿಸಿದ ಬಳಿಕ ಲೋಕಾಯುಕ್ತವು ಈ ಆದೇಶವನ್ನು ಹೊರಡಿಸಿತ್ತು.





