ವಿಶ್ವಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ಪಟ್ಟ ಈ ಸಲ ಮಹಿಳೆೆ ಒಲಿಯಲಿದೆಯೇ?

ವಿಶ್ವ ಸಂಸ್ಥೆಯ ನೂತನ ಮಹಾ ಕಾರ್ಯದರ್ಶಿಯ ಆಯ್ಕೆಗಾಗಿ ಆ.29ರಂದು ಮತದಾನ ನಡೆಯಲಿದೆ. ತನ್ನ ಉತ್ತರಾಕಾರಿಯಾಗಿ ಮಹಿಳೆಯೋರ್ವವರು ನೇಮಕಗೊಳ್ಳಬೇಕೆಂದು ತಾನು ಬಯಸುವುದಾಗಿ ಹಾಲಿ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.ವಿಶ್ವಸಂಸ್ಥೆಯ ಈ ಉನ್ನತ ಹುದ್ದೆಯನ್ನು ಕಳೆದ 70 ವರ್ಷಗಳಲ್ಲಿ 8 ಮಂದಿ ಪುರುಷರು ನಿರ್ವಹಿಸಿದ್ದು,ಮಹಿಳೆಯೊಬ್ಬರು ಅದನ್ನು ಅಲಂಕರಿಸಲು ಕಾಲ ಈಗ ಕೂಡಿಬಂದಿದೆಯೆಂದು ಬಾನ್ ಅವರು ಹೇಳಿದ್ದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಬಾನ್ ಅವರ ಎರಡನೆ ಅಕಾರಾವಯು ಈ ವರ್ಷದ ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ.
‘‘ರಾಷ್ಟ್ರೀಯ ಸರಕಾರಗಳು ಅಥವಾ ಇತರ ಸಂಸ್ಥೆಗಳಲ್ಲಿ ಅಥವಾ ಉದ್ಯಮ, ರಾಜಕೀಯ, ಸಾಂಸ್ಕೃತಿಕ ಪ್ರತಿಯೊಂದು ರಂಗದಲ್ಲೂ ಹಲವು ಮಂದಿ ಅಸಾಧಾರಣ ಹಾಗೂ ಶ್ರೇಷ್ಠ ಮಹಿಳಾ ನಾಯಕಿಯರಿದ್ದಾರೆ’’ ಎಂದು ಅವರು ಆಗಸ್ಟ್ 11ರಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಿರ್ಗಮಿಸಲಿರುವ ವ್ಯಕ್ತಿಯೊಬ್ಬರು ಉತ್ತರಾಕಾರಿಯ ನೇಮಕದ ಬಗ್ಗೆ ತನ್ನ ಆದ್ಯತೆಯನ್ನು ಬಹಿರಂಗಪಡಿಸಿರುವುದು ಇದೇ ಮೊದಲ ಸಲವಾಗಿದೆ. ವಿಶ್ವದ ಈ ಅತ್ಯುನ್ನತ ಹುದ್ದೆಗೆ ನಡೆಯುವ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗುವಂತೆ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯ ಮಹಾ ಅಧ್ಯಕ್ಷ ಮೊಗ್ನೆಸ್ ಲಿಕ್ಕೆಟ್‌ಟೊ ಅಭಿನಂದನಾ ರ್ಹರಾಗಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚುನಾವಣೆಯ ಮೊದಲ ಸುತ್ತು ಜುಲೈ 21ರಂದು ನಡೆದಿದ್ದು, 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ ಆರು ಮಂದಿ ಮಹಿಳೆಯರು. ಯುನೆಸ್ಕೊದ ಮಹಾನಿರ್ದೇಶಕಿ ಬಲ್ಗೇರಿಯದ ಇರಿನಾ ಬೊಕೊವಾ, ನ್ಯೂಝಿ ಲ್ಯಾಂಡ್‌ನ ಮಾಜಿ ಪ್ರಧಾನಿ ಹಾಗೂ ಯುಎನ್‌ಡಿಪಿಯ ಹಾಲಿ ಆಡಳಿತಾಕಾರಿಣಿ ಹೆಲೆನ್ ಕ್ಲರ್ಕ್, ಮಾಲ್ಡೊವಾ ಗಣರಾಜ್ಯದ ಮಾಜಿ ವಿದೇಶಾಂಗ ಸಚಿವೆ ನತಾಲಿಯಾ ಗೆರ್‌ಮಾನ್ ಕಣದಲ್ಲಿರುವ ಪ್ರಮುಖ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
ವಿಶ್ವಸಂಸ್ಥೆಯ ಅೀನ ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಅರ್ಜೆಂಟೀನಾದ ವಿದೇಶಾಂಗ ಸಚಿವೆ ಸುಸಾನಾ ಮಲ್ಕೊರಾ, ವಿಶ್ವಸಂಸ್ಥೆಯ ವಿದೇಶಾಂಗ ಕಾರ್ಯಾಲಯದ ಮುಖ್ಯಸ್ಥೆ ವೆಸ್ನಾ ಪ್ಯೂಸಿಕ್ ಹಾಗೂ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಕಾರ್ಯಚೌಕಟ್ಟಿ (ಯುಎನ್‌ಎ್ಸಿಸಿ)ನ ಮುಖ್ಯಸ್ಥೆ, ಕೋಸ್ಟರಿಕಾದ ಕ್ರಿಸ್ಟಿನಾ ಫಿಗೂರೆಸ್ ಕೂಡಾ ಸ್ಪರ್ಧೆಯಲ್ಲಿರುವ ವನಿತೆಯರಾಗಿದ್ದಾರೆ.
ಪುರುಷ ಅಭ್ಯರ್ಥಿಗಳ ಪೈಕಿ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಮಾಜಿ ಹೈಕಮಿಶನರ್ ಹಾಗೂ ಪೋರ್ಚುಗಲ್‌ನ ಮಾಜಿ ಪ್ರಧಾನಿ ಯೂಕ್ ಜೆರ್ಮಿಕ್, ಸರ್ಬಿಯಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ಆಂಟೊನಿಯೊ ಗ್ಯೂಟೆರೆಸ್ ಮತ್ತು ಸರ್ಬಿಯದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಯೂಕ್ ಜೆರೆಮಿಕ್,ಮ್ಯಾಸಿಡೊನಿಯದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ರಿಗ್‌ಜಾನ್ ಕೆರೀಂ ಪ್ರಮುಖರಾಗಿದ್ದಾರೆ.
ಬೊಸ್ನಿಯಾ ಹಾಗೂ ಹೆರ್ಜೆಗೊವಿನಾದ ಮಾಜಿ ಉನ್ನತ ಪ್ರತಿನಿ ಮತ್ತು ಸ್ಲೊವಾಕಿಯಾದ ವಿದೇಶಾಂಗ ಸಚಿವ ಮಿರೊಸ್ಲಾವ್ ಲ್ಯಾಕ್‌ಜಾಕ್, ಮೊಂಟೆನಿಗ್ರೊದ ಮಾಜಿ ಪ್ರಧಾನಿ ಹಾಗೂ ಹಾಲಿ ವಿದೇಶಾಂಗ ಸಚಿವ ಇಗೊರ್ ಲ್ಯುಕ್‌ಸಿಕ್, ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಲೊವೆನಿಯಾದ ಅಧ್ಯಕ್ಷ ಡ್ಯಾನಿಲೊ ಟುರ್ಕ್ ಕಣದಲ್ಲಿರುವ ಇತರ ಪುರುಷ ಅಭ್ಯರ್ಥಿಗಳಾಗಿದ್ದಾರೆ.
ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಚಲಾಯಿಸುವ ಅಕಾರ ಹೊಂದಿರುವ ಐದು ರಾಷ್ಟ್ರಗಳಾದ ಅಮೆರಿಕ, ರಶ್ಯಾ, ಚೀನಾ, ್ರಾನ್ಸ್ ಹಾಗೂ ಬ್ರಿಟನ್‌ಗಳು ಚುನಾವಣೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿವೆ. ಈ ಐದು ರಾಷ್ಟ್ರಗಳು ಅನುಮೋದನೆ ಪಡೆದೇ ಅಭ್ಯರ್ಥಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅವಿರೋಧವಾಗಿ ಶಿಾರಸು ಮಾಡಲಾಗುತ್ತದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡುವಾಗ ಪ್ರತಿ ಬಾರಿಯೂ ಆವರ್ತನಕ್ಕನುಗುಣವಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳ ಅಭ್ಯರ್ಥಿಗೆ ಆದ್ಯತೆ ನೀಡುವ ಸಂಪ್ರದಾಯವಿದೆ. ಹಾಗಾದಲ್ಲಿ ಮುಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೂರ್ವ ಯುರೋಪ್‌ನ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ.ಆಗಸ್ಟ್ 5ರಂದು ನಡೆದ ಎರಡನೆ ಸುತ್ತಿನ ಚುನಾವಣೆಯಲ್ಲಿ ಕ್ರೊಯೇಶಿಯಾದ ವೆಸ್ನಾ ಪ್ಯುಸಿಕ್ ಕಣದಿಂದ ಹಿಂದೆ ಸರಿದಿದ್ದರು. 21ರಂದು ಪ್ರಕಟವಾದ ಮೊದಲನೆ ಸುತ್ತಿನ ಮತದಾನದಲ್ಲಿ ಆಕೆ ಎರಡು ವರ್ಷಗಳ ಅವಯನ್ನು ಹೊಂದಿರುವ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರಗಳ 10 ಮತಗಳು ಸೇರಿದಂತೆ 11 ‘ನಿರುತ್ಸಾಹದಾಯಕ’ (ವಿರೋಧ) ಮತಗಳನ್ನು ಪಡೆದಿದ್ದರು.
ಆಗಸ್ಟ್ 5ರಂದು ಹೊರಬಿದ್ದ ಲಿತಾಂಶಗಳ ಪ್ರಕಾರ ಪೋರ್ಚುಗೀಸ್‌ನಮಾಜಿ ಪ್ರಧಾನಿ ಆ್ಯಂಟೊನಿಯೊ ಗುಂಟೆರೆಸ್ ಸ್ಪರ್ಧೆಯಲ್ಲಿ ಮುನ್ನಡೆ ಸಾಸಿದ್ದಾರೆ. 11 ಮಂದಿ ಸದಸ್ಯರು ಅವರ ಉಮೇದುವಾರಿಕೆಯನ್ನೂ ಪ್ರೋತ್ಸಾಹಿಸಿದ್ದರೆ, ಇನ್ನಿಬ್ಬರು ನಿರುತ್ಸಾಹವನ್ನು ಪ್ರದರ್ಶಿಸಿದ್ದಾರೆ ಹಾಗೂ ಇನ್ನಿಬ್ಬರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸರ್ಬಿಯಾದ ಜೆರ್ಮಿಕ್ ಎಂಟು ‘ಪ್ರೋತ್ಸಾಹಕ’, ನಾಲ್ಕು ‘ನಿರುತ್ತೇಜಕ’ ಹಾಗೂ ಮೂರು ‘ತಟಸ್ಥ’ ಮತಗಳನ್ನು ಪಡೆದಿದ್ದಾರೆ.
ಅರ್ಜೆಂಟೀನಾದ ಮಾಲ್ಕೊರ್ರಾ ಎಂಟು ಉತ್ತೇಜಕ, ಆರು ನಿರುತ್ತೇಜಕ ಹಾಗೂ ಒಂದು ನಿರ್ಲಿಪ್ತ ಮತಗಳನ್ನು ಪಡೆದಿದ್ದಾರೆ. ಅವರಿಗಿಂತ ಹಿಂದಿರುವ ಸ್ಲೊವೆನಿಯಾದ ಟುರ್ಕ್, 7 ಪ್ರೋತ್ಸಾಹಕ, ನಾಲ್ಕು ನಿರುತ್ತೇಜಕ ಹಾಗೂ ಒಂದು ನಿರ್ಲಿಪ್ತ ಮತವನ್ನು ಪಡೆದಿದ್ದಾರೆ.ಬಲ್ಗೇರಿಯದ ಬುಕುವೊ ಏಳು ಉತ್ತೇಜಕ, ಏಳು ನಿರುತ್ಸಾಹದಾಯಕ ಹಾಗೂ ಒಂದು ನಿರ್ಲಿಪ್ತ ಮತ ಗಳಿಸಿದ್ದಾರೆ. ಈ ಮಹತ್ವದ ಹುದ್ದೆಗೆ ೇವರಿಟ್ ಅಭ್ಯರ್ಥಿ ಎಂದೇ ಪರಿಗಣಿಸಲ್ಪಟ್ಟಿದ್ದ ನ್ಯೂಝಿಲ್ಯಾಂಡ್‌ನ ಕ್ಲರ್ಕ್ ಆರು ಪ್ರೋತ್ಸಾಹದಾಯಕ, ಎಂಟು ನಿರುತ್ತೇಜಕ ಮತಗಳನ್ನು ಗಳಿಸಿದ್ದಾರೆ ಹಾಗೂ ಓರ್ವ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಅನಕೃತವಾಗಿ ಬಹಿರಂಗಗೊಂಡಿರುವ ಮೊದಲ ಎರಡು ಸುತ್ತಿನ ಲಿತಾಂಶಗಳ ಪ್ರಕಾರ ಚುನಾವಣೆಯು ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರನ್ನೊಳಗೊಂಡಂತೆ ಐವರು ಅಭ್ಯರ್ಥಿಗಳ ನಡುವೆ ಕೇಂದ್ರೀಕೃತವಾಗಿರುವ ಹಾಗೆ ಕಾಣಿಸುತ್ತಿದೆಯೆಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವಿಶ್ವಸಂಸ್ಥೆಯ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ. ಈ ಐವರು ಆಕಾಂಕ್ಷಿಗಳ ಪೈಕಿ ಮೂವರು ಪೂರ್ವ ಯುರೋಪ್‌ನ ರಾಷ್ಟ್ರಗಳಾದ ಸೈಬೀರಿಯ, ಸ್ಲೊವೇನಿಯಾ ಹಾಗೂ ಬಲ್ಗೇರಿಯಗಳಿಗೆ ಸೇರಿದವರೆಂದು ಅವರು ಹೇಳಿದ್ದಾರೆ.
ಮುಂದಿನ ಹಂತದ ಚುನಾವಣೆಗಳಲ್ಲಿ ಈ ಐವರಲ್ಲಿ ಯಾರು ಹೊರಗುಳಿಯುತ್ತಾರೆಂಬ ಕುತೂಹಲವೀಗ ಗರಿಗೆದರಿದೆ. 1982ರ ಎಪ್ರಿಲ್ 2ರಂದು ಬ್ರಿಟನ್ ವಿರುದ್ಧ ಅರ್ಜೆಂಟೀನಾವು ಹತ್ತುವಾರಗಳ ಕಾಲ ಾಕ್‌ಲ್ಯಾಂಡ್ ಸಮರ ನಡೆಸಿದ ಸಂದರ್ಭದಲ್ಲಿ ಆ ದೇಶದ ವಿದೇಶಾಂಗ ಸಚಿವೆಯಾಗಿದ್ದ ಮಾಲ್ಕೊರ್ರಾ ಅವರು ಸ್ಪರ್ಧೆಯಿಂದ ನಿರ್ಗಮಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಯುಎನ್‌ಡಿಪಿಯ ಹಾಲಿ ವರಿಷ್ಠರಾದ ನ್ಯೂಝಿಲ್ಯಾಂಡ್‌ನ ಕ್ಲರ್ಕ್ ಕೂಡಾ ಮುಂದಿನ ಸುತ್ತಿನ ಚುನಾವಣೆಯಲ್ಲಿ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕೆಂದರೆ ಆಕೆ ವಿಶ್ವಸಂಸ್ಥೆಯ ಪಶ್ಚಿಮ ಯುರೋಪ್ ಮತ್ತಿತರ ರಾಷ್ಟ್ರಗಳ ಗುಂಪು(ಡಬ್ಲುಇಒಜಿ) ಮೈತ್ರಿಕೂಟಕ್ಕೆ ಸೇರಿದವರಾಗಿದ್ದಾರೆ. ಈ ಕೂಟಕ್ಕೆ ಸೇರಿದ ಮೂವರು ಈಗಾಗಲೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಟ್ರಿಗೆವ್ ಲಿ (ನಾರ್ವೆ), ಡ್ಯಾಗ್ ಹ್ಯಾಮರ್‌ಸ್ಕೊಲ್ಡ್ (ಸ್ವೀಡನ್) ಹಾಗೂ ಕುರ್ಟ್ ವಾಲ್ಡ್‌ಹೆಮ್ (ಆಸ್ಟ್ರೀಯ) ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಕ್ಲರ್ಕ್‌ಗೆ ಇತರ ರಾಷ್ಟ್ರಗಳ ಬೆಂಬಲ ದೊರೆಯುವ ಸಾಧ್ಯತೆ ತೀರಾ ಕಡಿಮೆಯೆನ್ನಲಾಗಿದೆ.







