ನಾಳೆ ಅಧ್ಯಯನ ಶಿಬಿರ
ಬಂಟ್ವಾಳ, ಆ.28: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ.ಕ. ಮುಶಾವರದ ವತಿಯಿಂದ ಆ.30ರಂದು ಬೆಳಗ್ಗೆ 10:30ಕ್ಕೆ ಅಡ್ಯಾರು ಕಣ್ಣೂರು ಜುಮಾ ಮಸೀದಿ ವಠಾರದಲ್ಲಿ ಅಧ್ಯಯನ ಶಿಬಿರ ನಡೆಯಲಿದೆ. ಸಮಸ್ತ ಕೇಂದ್ರ ಮುಶಾವರದ ಕೋಶಾಧಿಕಾರಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುಆ ನೆರವೇರಿಸುವರು. ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಎಂ.ಟಿ.ಅಬ್ದುಲ್ ಮುಸ್ಲಿಯಾರ್ ‘ಉಳುಹಿಯ್ಯತ್’ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





