ಉಡುಪಿ: ಸ್ವಯಂ ಉದ್ಯೋಗಕ್ಕಾಗಿ ವಾಹನ ವಿತರಣೆ

ಉಡುಪಿ, ಆ.28: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಂಬಾಗಿಲು ಶಾಖೆ ಎಂಟು ಮಂದಿಗೆ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ನೀಡಿದ ಆಟೊರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳ ವಿತರಣಾ ಕಾರ್ಯಕ್ರಮ ರವಿವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಪ್ರಬಂಧಕ ಬಸವರಾಜ್ ಹೋಳ್ಕರ್ ವಹಿಸಿದ್ದರು. ನಗರಸಭಾ ಸದಸ್ಯೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ ವಾಹನ ಮಾಲಕರಿಗೆ ಕೀಲಿಕೈ ಹಸ್ತಾಂತರಿಸಿ ಶುಭ ಹಾರೈಸಿದರು. ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉಪಮಹಾಪ್ರಬಂಧಕ ಕೆ.ಎಂ.ಉಡುಪ, ಪವನ್ ಮೋಟರ್ಸ್‌ನ ಮಾಲಕ ಸುಭಾಸ್‌ಚಂದ್ರ ಹೆಗ್ಡೆ ಮಾತನಾಡಿದರು. ಶಾಖೆಯ ಪ್ರಬಂಧಕ ಕೆ.ಭಾಸ್ಕರ ಭಟ್ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಶ್ರೀಧರ ಉರಾಳ, ಕುಮಾರ ಆಚಾರ್ಯ, ಆಯುಬ್ ಖಾನ್ ಅನಿಸಿಕೆ ವ್ಯಕ್ತಪಡಿಸಿದರು. ಇಂದ್ರಾಳಿ ಶಾಖೆಯ ಪ್ರಬಂಧಕ ಶ್ರೀರಾಘವೇಂದ್ರ ಉಪಾಧ್ಯಾಯ ವಂದಿಸಿದರು. ಉಡುಪಿ ಮುಖ್ಯ ಶಾಖೆಯ ಹಿರಿಯ ಪ್ರಬಂಧಕ ಜಗದೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.
Next Story





