Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪರ್ಸ್ ಮರೆತು ನಮಾಝಿಗೆ ಹೊರಟವನಿಗೆ ಈ ಆಟೋ...

ಪರ್ಸ್ ಮರೆತು ನಮಾಝಿಗೆ ಹೊರಟವನಿಗೆ ಈ ಆಟೋ ಚಾಲಕ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ ?

ಈ ಹೃದಯ ವೈಶಾಲ್ಯಕ್ಕೆ ಸಾಟಿಯಿಲ್ಲ

ವಾರ್ತಾಭಾರತಿವಾರ್ತಾಭಾರತಿ29 Aug 2016 10:17 AM IST
share
ಪರ್ಸ್ ಮರೆತು ನಮಾಝಿಗೆ ಹೊರಟವನಿಗೆ ಈ ಆಟೋ ಚಾಲಕ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ ?

ಮುಂಬೈ, ಆ.29: ಆಟೊರಿಕ್ಷಾ ಚಾಲಕನೊಬ್ಬನ ಪ್ರಾಮಾಣಿಕತೆ ಹಾಗೂ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿರುವ ಮತ್ತು ಮತಾಂಧ ಶಕ್ತಿಗಳ ಕಣ್ಣು ತೆರೆಸುವಂತಹ ಘಟನೆಯೊಂದು ಇತ್ತೀಚೆಗೆ ಮುಂಬೈ ಮಹಾನಗರಿಯಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದಿದ್ದು ಈ ಆಟೋಚಾಲಕನ ಹೃದಯ ವೈಶಾಲ್ಯವನ್ನು ಕಣ್ಣಾರೆ ಕಂಡಿರುವ ಮುಂಬೈ ನಿವಾಸಿ ರಮೀಝ್ ಶೇಖ್ ಎಂಬವರ ಫೇಸ್‌ಬುಕ್ ಪೋಸ್ಟ್ ನಿಂದ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು ಸಾವಿರಾರು ಜನರು ಆಟೊಚಾಲಕನ ಹೃದಯವಂತಿಕೆಗೆ ತಲೆಬಾಗಿದ್ದಾರೆ.

ಘಟನೆ ನಡೆದಿದ್ದು ಆಗಸ್ಟ್ 26 ರಂದು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಶೇಖ್, ಅಂದು ಶುಕ್ರವಾರವಾಗಿದ್ದರಿಂದ ಮಸೀದಿಗೆ ನಮಾಝಿಗೆಂದು ಅವಸವಸರವಾಗಿ ಕಚೇರಿಯಿಂದ ಹೊರಟಿದ್ದರು. ಆಟೊರಿಕ್ಷಾವೊಂದನ್ನು ಹತ್ತಿದ ಕೂಡಲೇ ಅವರು ತಾವು ತಮ್ಮ ಪರ್ಸನ್ನು ಕಚೇರಿಯಲ್ಲ್ಲಿಯೇ ಮರೆತು ಬಿಟ್ಟಿದ್ದನ್ನು ನೆನಪಿಸಿಕೊಂಡರು. ಮತ್ತೆ ಕಚೇರಿಗೆ ಹಿಂದಿರುಗಿದರೆ ನಮಾಝ್‌ಗೆ ತಡವಾಗುವುದೆಂದು ಅರಿತು ಆಟೊಚಾಲಕನಲ್ಲಿ ಈ ಬಗ್ಗೆ ಹೇಳಿ, ನಮಾಝ್ ಮುಗಿಯುವ ತನಕ ಅಲ್ಲಿಯೇ ಕಾದು ನಂತರ ತನ್ನನ್ನು ಕಚೇರಿಗೆ ಬಿಟ್ಟರೆ ಹೆಚ್ಚಿನ ಬಾಡಿಗೆ ನೀಡುವುದಾಗಿ ಹೇಳಿದಾಗ ಆ ಆಟೊರಿಕ್ಷಾ ಚಾಲಕನೀಡಿದ ಉತ್ತರ ಎಂಥವರ ಮನವನ್ನೂ ಮುಟ್ಟುವಂತಿತ್ತು.

ರಮೀಝ್ ಶೇಖ್ ಅವರ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ. ‘‘ಗಣಪತಿ ಉತ್ಸವದ ಸ್ಟಿಕ್ಕರ್ ಅಂಟಿಸಲ್ಪಟ್ಟಿದ್ದ ಆಟೊದ ಚಾಲಕ ನನ್ನನ್ನು ನೋಡಿ ‘ನೀವು ದೇವರ ಕಾರ್ಯಕ್ಕಾಗಿ ಹೋಗುತ್ತಿದ್ದೀರಿ, ಟೆನ್ಶನ್ ಮಾಡಿಕೊಳ್ಳಬೇಡಿ. ನಾನು ನಿಮ್ಮನ್ನು ಮಸೀದಿ ತನಕ ಬಿಡುತ್ತೇನೆ. ಆದರೆ ನೀವು ಹಿಂದಿರುಗುವ ತನಕ ನನಗೆ ಕಾಯಲಾಗುವುದಿಲ್ಲ. ನನಗೆ ಮುಂದೆ ಹೋಗುವುದಿದೆ...’’

‘‘ನಾನು ಆಟೋದವನಿಗೆ ಧನ್ಯವಾದ ಹೇಳಿದೆ ಹಾಗೂ ಸ್ವಲ್ಪ ಹೊತ್ತಿನಲ್ಲಿಯೇ ಆಟೋ ಮಸೀದಿ ತಲುಪಿತ್ತು. ಅಲ್ಲಿ ನಾನು ನಂಬಲಾರದ ಘಟನೆಯೊಂದು ನಡೆದಿತ್ತು.ಆಟೋ ಚಾಲಕ ತನ್ನ ಕಿಸೆಯಿಂದ ಸ್ವಲ್ಪ ಹಣ ತೆಗೆದು ನಾನು ನಮಾಝ್ ಮುಗಿಸಿ ಮತ್ತೆ ಕಚೇರಿಗೆ ತೆರಳಲು ಹಣ ನೀಡಿದ. ನನಗಾಗಿ ಕಾದು ನನ್ನನ್ನು ಮತ್ತೆ ಕಚೇರಿಗೆ ಬಿಡುವಷ್ಟು ಆತನಿಗೆ ಸಮಯವಿಲ್ಲದೇ ಇದ್ದರೂ ನನ್ನ ಕೈಯಲ್ಲಿ ಹಣವಿಲ್ಲದೇ ಇರುವುದರಿಂದ ನನಗೆ ಮತ್ತೆ ಕಚೇರಿ ತಲುಪಲು ತೊಂದರೆಯಾಗದಂತೆ ಆತ ನೋಡಿಕೊಂಡಿದ್ದ.’’

ರಮೀಝ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮತ್ತೆ ಈ ರೀತಿ ಬರೆಯಲಾಗಿದೆ ‘‘ಶುಕ್ಲಾ ಜಿಯವರನ್ನು ಭೇಟಿ ಮಾಡಿ (ಅಲ್ಲಿ ಆ ಆಟೋ ಚಾಲಕನ ಚಿತ್ರವನ್ನೂ ಪೋಸ್ಟ್ ಮಾಡಲಾಗಿದೆ) ಸಾಮಾನ್ಯ ಆಟೊಚಾಲಕರಿಗಿಂತ ಭಿನ್ನವಾಗಿರುವ ಈ ‘ಆಟೋವಾಲಾ’ ಹಣೆಯಲ್ಲಿ ದೊಡ್ಡಕೆಂಪು ತಿಲಕವಿಟ್ಟುಕೊಂಡಿರುವ’ ‘ಗಣಪತಿ ಭಕ್ತ್.’ ವ್ಯಕ್ತಿಯೊಬ್ಬ ಯಾವುದೇ ಸಮಸ್ಯೆಯಿಲ್ಲದೆ ಶಾಂತಚಿತ್ತದಿಂದ ತನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸಲಿ ಎಂದು ಆತ ಶ್ರಮಿಸಿದ್ದಾನೆ.’’
ಈ ಹೃದಯಸ್ಪರ್ಶಿ ಪೋಸ್ಟ್ ಅನ್ನು ಈಗಾಗಲೇ 5000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಒಬ್ಬರಂತೂ ‘‘ಯೇ ಹೇ ರಿಯಲ್ ಇಂಡಿಯಾ’’ ಎಂದು ಕಮೆಂಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X