ಮಚ್ಚಂಪಾಡಿ: ಎಸ್ಕೆಎಸ್ಸೆಸ್ಸೆಫ್‌ನಿಂದ ಮಾದಕ ವಸ್ತುಗಳ ವಿರುದ್ಧದ ಅಭಿಯಾನ ಉದ್ಘಾಟನೆ
.jpg)
ಮಂಜೇಶ್ವರ, ಆ.29: ಎಸ್ಕೆಎಸ್ಸೆಸ್ಸೆಫ್ ಮಚ್ಚಂಪಾಡಿ ಶಾಖೆಯ ವತಿಯಿಂದ ‘ನಾವು ಒಂದಾಗೋಣ ಲಹರಿ ಮುಕ್ತ ಭವಿಷ್ಯಕ್ಕೆ’ ಎಂಬ ಘೋಷಣೆಯಡಿ ಮಾದಕ ದ್ರವ್ಯಗಳ ವಿರುದ್ಧ ಮುನ್ನಡೆ ಅಭಿಯಾನ ಕಾರ್ಯಕ್ರಮ ಹಾಗೂ ಎಸ್ಕೆಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಸಮಿತಿ ‘ಲಹರಿ ವರ್ಜಿಸಿ ಜೀವ ರಕ್ಷಿಸಿ’ ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ 3 ತಿಂಗಳ ಮಾದಕದ್ರವ್ಯ ವಿರುದ್ದ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಮಚ್ಚಂಪಾಡಿ ಸಿ.ಎಚ್.ನಗರದಲ್ಲಿ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ದಾರಿಮಿ ಅಧ್ಯಕ್ಷತೆಯಲ್ಲಿ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉದ್ಗಾಟಿಸಿದರು. ಕುಂಬಳೆ ಎಕ್ಸೈಸ್ ಇನ್ಸ್‌ಪೆಕ್ಟರ್ ಎಂ.ವಿ. ಬಾಬುರಾಜ್ ವಿಷಯ ಮಂಡಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚೆಗಿನ ದಿನಗಳಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾಫಿಯಾ ನೇತೃತ್ವದಲ್ಲಿ ನಡೆಯುತ್ತಿದ್ದು ಇದು ಅಪಾಯಕಾರಿ ಎಂದರು. ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಹಾಗೂ ಪೋಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳುತ್ತಿದೆಯೆಂದರು.
ಅನ್ವರ್ ಅಲೀ ಹುದವಿ ಪ್ರಮೇಯ ಭಾಷಣ ಮಾಡಿ, ಮಕ್ಕಳ ಪೋಷಣೆಯಲ್ಲಿ ಪೋಷಕರು ಜಾಗರೂಕರಾಗಿರಬೇಕು. ಮಕ್ಕಳಿಗೆ ನೀಡುವ ಅತಿಯಾದ ಸ್ವಾತಂತ್ರ್ಯ ಮಕ್ಕಳನ್ನು ಹಾಳು ಮಾಡುತ್ತಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕೆಂದರು.
ಸೈಯದ್ ಸೈಪುಲ್ಲಾ ತಂಙಳ್, ಹರ್ಷಾದ್ ವರ್ಕಾಡಿ, ಗ್ರಾಮ ಪಂಚಾಯತು ಸದಸ್ಯ ಪೈಝಲ್, ಪಿ.ಎಚ್.ಅಬ್ದುಲ್ ಹಮೀದ್, ಎಸ್ಕೆಎಸ್ಸೆಸ್ಸೆಫ್ ಮಂಜೇಶ್ವರ ವಲಯ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಅರ್ಹರಿ, ಮುಹಮ್ಮದ್ ಪೈಝಿ ಕಜೆ, ಮುಹಮ್ಮದ್ ದಾರಿಮಿ, ಯೂಸುಫ್ ಬಾಖವಿ, ಬಶೀರ್ ಮುಸ್ಲಿಯಾರ್, ಅಬ್ದುನಾಸಿರ್ ಯಮಾನಿ, ಗೋಲ್ಡನ್ ರಹ್ಮಾನ್, ಶರೀಫ್ ಪೈಝಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಜೀದ್, ಗ್ರಾಮ ಪಂಚಾಯತ್ ಸದಸ್ಯ ಹಾರಿಸ್ ಪಾವೂರು ಮೊದಲಾದವರು ಮಾತನಾಡಿದರು.
ಮಚ್ಚಂಪಾಡಿ ಇಸ್ಲಾಮಿಕ್ ಸೆಂಟರ್ ಪದಾಧಿಕಾರಿಗಳಾದ ಅಝೀಝ್ ಹಾಜಿ, ಇಸ್ಮಾಯಿಲ್, ಶರೀಫ್ ಹಾಜಿ, ರಝಾಕ್ ಕೇರಿ, ಹಾರಿಸ್, ಇಬ್ರಾಹೀಂ.ಪಿ.ಪಿ., ಹಸನ್ ದಾರಿಮಿ ಪಾಪಿಲ, ಅಬ್ದುರ್ರಹ್ಮಾನ್ ಹಾಜಿ ಪಾಪಿಲ, ಹುಸೈನಾರ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳಾದ ಹುಸೈನಾರ್ , ನೌಫಲ್, ಸ್ವಾಲಿಹ್, ಕೆಬೀರ್, ನೌಶಾದ್, ನಿಸಾರ್ ಮೊದಲಾದವರು ಉಪಸ್ಥಿತರಿದ್ದರು.
ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು. ಮಜೀದ್ ಇಡಿಯ ವಂದಿಸಿದರು.







