ಗಲ್ಫ್‌ನಿಂದ ಮರಳಿದವರಿಗೆ ಕ್ಷೇಮ ಯೋಜನೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಶೋರ್ನೂರ್, ಆ.29: ಗಲ್ಫ್‌ನಿಂದ ಮರಳಿಬರುವವರಿಗೆ ಕೇಂದ್ರಸರಕಾರದ ಸಹಾಯದಿಂದ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳದ ಆರ್ಥಿಕ ವ್ಯವಸ್ಥೆ ಗಲ್ಫ್‌ಹಣವನ್ನು ಪ್ರಧಾನವಾಗಿ ಆಧರಿಸಿ ನೆಲೆಯೂರಿದೆ ಎಂದು ಅವರು ಶೋರ್ನೂರಿನಲ್ಲಿ ಅಬುಧಾಬಿ-ಶಕ್ತಿ ಪ್ರಶಸ್ತಿ ವಿತರಿಸುತ್ತಾ ಹೇಳಿದ್ದಾರೆಂದು ವರದಿಯಾಗಿದೆ.
ಕೇಂದ್ರ ವಿಶ್ವವಿದ್ಯಾನಿಲಯದ ಪ್ರಧಾನ ಸ್ಥಾನಗಳಿಗೆ ಆರೆಸ್ಸೆಸ್ ನಾಯಕರನ್ನು ನೇಮಕಗೊಳಿಸುತ್ತಿದೆ. ಸಾಂಸ್ಕೃತಿಕ ರಂಗದ ಪ್ಯಾಶಿಸ್ಟ್ ಪ್ರವೃತ್ತಿ ಅಪಾಯಕಾರಿಯಾಗಿದೆ ಎಂದು ಪಿಣರಾಯಿ ಹೇಳಿದ್ದಾರೆಎಂದು ವರದಿತಿಳಿಸಿದೆ.
Next Story





