ವೆನೆಝುವೇಲ: ಪ್ರತಿಪಕ್ಷ ನಾಯಕ ಮತ್ತೆ ಜೈಲಿಗೆ

ಕರಾಕ್ಕಸ್,ಆ.29: ಸರಕಾರ ಬುಡಮೇಲುಗೊಳಿಸುವ ಯತ್ನವನ್ನು ವಿಫಲಗೊಳಿಸುವ ಅಂಗವಾಗಿ ವೆನೆಝುವೇಲದಲ್ಲಿ ಗೃಹಬಂಧನದಲ್ಲಿರುವ ಮುಖ್ಯಪ್ರತಿಪಕ್ಷ ನಾಯಕ ಝಾನ್ ಕ್ರಿಸ್ಟಬರ್‌ನ ಮಾಜಿ ಮೇಯರ್ ಆಗಿರುವ ಡೇನಿಯಲ್ ಸೆಬಲ್ಲಾಸ್‌ರು ಗೃಹಬಂಧನದಿಂದ ಜೈಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ. 32ವರ್ಷದ ಸೆಬಲ್ಲಾಸ್ ಸೆಪ್ಟಂಬರ್ ಒಂದಕ್ಕಿಂತ ಮೊದಲು ದೇಶದಾದ್ಯಂತ ಗಲಭೆನಡೆಸಲು ಯೋಜನೆ ಹಾಕಿದ್ದಾರೆ ಎಂಬ ಇಂಟಲಿಜೆನ್ಸ್ ವರದಿಯ ಹಿನ್ನೆಲೆಯಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು ಎಂದು ಸರಕಾರ ಹೇಳಿಕೆ ನೀಡಿದೆ. ಅಧ್ಯಕ್ಷ ನಿಕಲಾಸ್ ಮದೂರೊರ ವಿರುದ್ಧ ಜನಮತಗಣನೆ ನಡೆಯಬೇಕೆಂದು ಗುರುವಾರ ಜನತಾ ರ್ಯಾಲಿನಡೆಯಲಿದ್ದು, ಅದಕ್ಕೆಮೊದಲು ಸೆಬಲ್ಲಾಸ್‌ರನ್ನುಜೈಲಿಗೆ ತಳ್ಳಲಾಗಿದೆ.
ವೈದ್ಯಕೀಯ ತಪಾಸಣೆಗೆಂದು ಹೇಳಿ ಇವರನ್ನು ಕಸ್ಟಡಿಗೆ ಪಡೆಯಲಾಯಿತು ಎಂದು ಸೆಬಲ್ಲಾಸ್‌ರ ಮನೆಯವರು ಹೇಳಿದ್ದು, ಆರೋಗ್ಯ ತಪಾಸಣೆಗೆಂದು ಹೇಳಿ ಕೆಲವರು ಆ್ಯಂಬುಲೆನ್ಸ್‌ನಲ್ಲಿ ಸೆಬಲ್ಲಾಸ್‌ರನ್ನು ಕರೆದುಕೊಂಡು ಹೋಗಿದ್ದರು. ನಂತರ ಗ್ವಾರಿಕೊದ ಜೂಲಿನಲ್ಲಿರಿಸಲಾಗಿದೆ ಎಂದು ಸೆಬಲ್ಲಾಸ್ ಪತ್ನಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ. ಸರಕಾರದ ಈ ಕ್ರಮವನ್ನು ವಿರೋಧಿಸಿಮಾನವಹಕ್ಕು ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ರಂಗಪ್ರವೇಶಿಸಿವೆ.
ಕಳೆದ ಆಗಸ್ಟ್‌ನಿಂದ ಸೆಬಲ್ಲಾಸ್ ಮೂತ್ರಪಿಂಡಕ್ಕೆ ಸಂಬಂಧಿಸಿದ ಆರೋಗ್ಯಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಜೈಲಿನಿಂದ ಗೃಹಬಂಧನಕ್ಕೆ ಸ್ಥಳಾಂತರಿಸಲಾಗಿತ್ತು. ಸರಕಾರವನ್ನು ಉರುಳಿಸುವುದಕ್ಕಾಗಿ ಸರಕಾರದ ವಿರುದ್ಧ ರ್ಯಾಲಿ ನಡೆಸಿದ್ದಾರೆ ಎಂದು ಆರೋಪಿಸಿ 2014ರಲ್ಲಿ ಸೆಬಲ್ಲಾಸ್ ಮತ್ತು ಇನ್ನೋರ್ವ ಮೇಯರ್ ಆದ ಲಯೋಪಾಲ್ಡೊ ಲಾಪಸ್‌ರನ್ನು ಬಂಧಿಸಲಾಗಿತ್ತು. ಆರ್ಥಿಕ ಬಿಕ್ಕಟ್ಟು ತೀಕ್ಷ್ಣವಾದ ನಂತರ ವೆನೆಝವೇಲದಲ್ಲಿ ಹಣದುಬ್ಬರ ಸ್ಥಿತಿ ನಿರ್ಮಾಣವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯ ಲಾಭವೆತ್ತಿ ಸರಕಾರವನ್ನು ಬುಡಮೇಲುಗೊಳಿಸುವ ಯತ್ನವಾಗದಂತೆ ತಡೆಯಲು ಮದೂರೊ ಎಂಬಲ್ಲಿ ತುರ್ತುಪರಿಸ್ಥಿತಿಯನ್ನು ವೆನಝುವೇಲ ಸರಕಾರ ಘೋಷಿಸಿದೆ ಎಂದು ವರದಿ ತಿಳಿಸಿದೆ.







