ಯೆಮನ್ ಆರ್ಮಿ ಕ್ಯಾಂಪ್‌ಗೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ; ಕನಿಷ್ಠ 60 ಸಾವು

ಅಡೆನ್, ಆ.29: ಯೆಮನ್‌ನ ಅಡೆನ್ ನಗರದ ಆರ್ಮಿ ತರಬೇತಿ ಶಿಬಿರಕ್ಕೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದ ಪರಿಣಾಮವಾಗಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.
29 ಮಂದಿ ಗಾಯಗೊಂಡಿದ್ದಾರೆ. ಉತ್ತರ ಅಡೆನ್‌ನಲ್ಲಿ ಸೇನೆಗೆ ನೂತನವಾಗಿ ಸೇರ್ಪಡೆಗೊಂಡ ಸೈನಿಕರ ತರಬೇತಿ ಶಿಬಿರದ ಮೇಲೆ ದಾಳಿ ನಡೆದಿದ್ದು, ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಕಳೆದ ಎರಡು ತಿಂಗಳಿನಿಂದ ಇಲ್ಲಿ ಸೈನಿಕರಿಗೆ ತರಬೇತಿ ನೀಡಲಾಗುತ್ತಿದೆ.
Next Story





