ಮಹಿಳೆಯರಿಗೆ ಪ್ರವೇಶ: ಇನ್ನು ಶಬರಿಮಲೆಯತ್ತ ಎಂದ ತೃಪ್ತಿದೇಸಾಯಿ

ಮುಂಬೈ,ಆ.29: ಆರಾಧಾನಾಲಯಗಳಿಗೆ ಮಹಿಳೆಯರ ಪ್ರವೇಶ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಮಹಾರಾಷ್ಟ್ರದ ಸ್ವಯಂಸೇವಾ ಸಂಘಟನೆ ಭೂಮಾತಾ ಬ್ರಿಗೇಡ್‌ನ ಮುಂದಿನ ಗುರಿಶಬರಿಮಲೆಯಾಗಿದೆ. ಮುಂಬೈಯ ಹಾಜಿಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದ ಬಳಿಕ ರವಿವಾರ ದರ್ಗಾ ಸಂದರ್ಶನಕ್ಕೆ ಬಂದಿದ್ದ ಭೂಮಾತಾ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿದೇಸಾಯಿ ಶಬರಿಮಲೆ ದೇವಳ ಮಹಿಳೆಯರ ಪ್ರವೇಶದ ಕುರಿತು ಹೋರಾಡುವ ಕುರಿತು ಸೂಚನೆ ನೀಡಿದ್ದಾರೆಂದು ವರದಿಯೊಂದು ತಿಳಿಸಿದೆ. ಶಬರಿಮಲೆಯಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಸಂಬಂಧಿಸಿದವರಿಗೆ ಈ ಮೊದಲೇ ಪತ್ರ ಬರೆದಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ತನ್ನ ಹೋರಾಟ ಧರ್ಮಗಳ ವಿರುದ್ಧವಾಗಿಲ್ಲ ಬದಲಾಗಿ ಲಿಂಗತಾರತಮ್ಯದ ವಿರುದ್ಧವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬಾಂಬೆಹೈಕೋರ್ಟ್ ಹಾಜಿಅಲಿ ದರ್ಗಾಕ್ಕೆ ಮಹಿಳೆಯರಿಗೂಪ್ರವೇಶಿಸುವ ಹಕ್ಕಿದೆ ಎಂದು ತೀರ್ಪುನೀಡಿತ್ತು. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಈ ತೀರ್ಪು ನೀಡಿತ್ತು. ದರ್ಗಾ ಟ್ರಸ್ಟ್‌ನ ಅರ್ಜಿಪ್ರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬಾಂಬೆ ಹೈಕೋರ್ಟ್ ಒಂದೂವರೆ ತಿಂಗಳ ಸಮಯಾವಕಾಶ ನೀಡಿದ್ದು ಆವರೆಗೆ ತನ್ನ ತೀರ್ಪನ್ನು ತಡೆಹಿಡಿದಿದೆ ಎಂದು ವರದಿ ತಿಳಿಸಿದೆ.
ಆದರೆ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ ರವಿವಾರ ತನ್ನ ಅನುಯಾಯಿಗಳೊಂದಿಗೆ ಹಾಜಿಅಲಿದರ್ಗಾಕ್ಕೆ ಬಂದಿದ್ದರು. ದರ್ಗಾಸಂದರ್ಶಿಸದಂತೆ ನಮ್ಮನ್ನು ಯಾರೂ ತಡೆದಿಲ್ಲ ಎಂದು ತೃಪ್ತಿ ಹೇಳಿದ್ದಾರೆ.ಕೋರ್ಟು ತೀರ್ಪನ್ನು ಗೌರವಿಸಬೇಕೆಂದು ದರ್ಗಾಟ್ರಸ್ಟ್ ಸದಸ್ಯರೊಂದಿಗೆ ವಿನಂತಿಸಿದೆ ಎಂದೂ ತೃಪ್ತಿ ಹೇಳಿದ್ದಾರೆ.ಅಹ್ಮದ್‌ನಗರ್ ಶನಿಶಿಂಗಣಾಪುರ್ ದೇವಳಕ್ಕೆ ಮಹಿಳೆಯರ ಪ್ರವೇಶ ಹಕ್ಕಿಗಾಗಿ ಹೋರಾಟಕ್ಕಿಳಿದ ಬಳಿಕ ತೃಪ್ತಿದೇಶಾಯಿ ಎಲ್ಲರ ಗಮನಕ್ಕೆ ಬಂದಿದ್ದರು.







