15 ಗಂಟೆ ನಿಂತ 9 ತಿಂಗಳ ಶಿಶುವಿನ ಹೃದಯ !

ಲಂಡನ್, ಆ. 29: ದೊಡ್ಡ ರಂಧ್ರ ಹೊಂದಿರುವ ಹೃದಯದೊಂದಿಗೆ ಹುಟ್ಟಿ ನಿಶ್ಚಿತ ಸಾವನ್ನು ಎದುರು ನೋಡುತ್ತಿದ್ದ ಬ್ರಿಟನ್‌ನ 9 ತಿಂಗಳ ಶಿಶುವಿಗೆ ವೈದ್ಯರು ಮ್ಯಾರತಾನ್ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಿದ್ದಾರೆ.
ಜೀವರಕ್ಷಕ ಶಸ್ತ್ರಚಿಕಿತ್ಸೆಯ 15 ಗಂಟೆಗಳವರೆಗೆ ನಡೆದಿದ್ದು, ಈ ಅವಧಿಯಲ್ಲಿ ಗಂಡು ಶಿಶುವಿನ ಹೃದಯವನ್ನು ವೈದ್ಯರು ನಿಲ್ಲಿಸಿದ್ದರು. ಈ ಸಂಕೀರ್ಣ ಶಸ್ತ್ರಕ್ರಿಯೆ ನಡೆಯದೆ ನತಾನ್ ಬಯರ್ನ್ ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಬದುಕುವ ಯಾವುದೇ ಸಾಧ್ಯತೆಯಿರಲಿಲ್ಲ. ಈಗ ನಗುತ್ತಿರುವ ಮಗುವಿನ ಚಿತ್ರವನ್ನು ಆಸ್ಪತ್ರೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಮಗು ಶಸ್ತ್ರಚಿಕಿತ್ಸೆಗೆ ಹೋಗುವಾಗ ತೀರಾ ನಿತ್ರಾಣವಾಗಿತ್ತು.
Next Story





