ನಗದು ಹಸ್ತಾಂತರಿಸಿದ ಸಂಚಾರ ಪೊಲೀಸ್
ಮಂಗಳೂರು, ಆ. 29: ನಗರದ ಲಾಲ್‌ಬಾಗ್‌ನಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸುರೇಶ್ ತನಗೆ ಸಿಕ್ಕಿದ್ದ 23,250 ರೂ. ವನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆ (ಬಂದರು)ಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.
ಬಿಜೈ ಬಿಗ್‌ಬಝಾರ್‌ನಿಂದ ಪಬ್ಬಾಸ್ ಕಡೆಗೆ ಬರುವ ವಾಹನದಿಂದ ಈ ಹಣದ ಕಟ್ಟು ಬಿದ್ದಿರಬೇಕೆಂದು ಹೇಳಲಾಗಿದೆ. ಸಂಬಂಧಪಟ್ಟವರು ವಿವರ ಗಳೊಂದಿಗೆ ಠಾಣೆಯನ್ನು ಸಂಪ ರ್ಕಿಸಿ ಹಣವನ್ನು ಪಡೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story





