ಗಾಂಜಾ ಸಾಗಾಟ: ಮಹಿಳೆಯ ಬಂಧನ
ಮಂಗಳೂರು,ಆ.29: ಜೈಲಿನಲ್ಲಿರುವ ತನ್ನ ಪತಿಗೆ ನೀಡಲು ಗಾಂಜಾ ಕೊಂಡೊಯ್ಯುತ್ತಿದ್ದ ಮಹಿಳೆಯನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಭಟ್ಕಳದ ಇಶ್ರತ್ (28) ಎಂದು ಗುರುತಿಸಲಾಗಿದೆ. ಈಕೆ ಸೋಮವಾರ ಬೆಳಗ್ಗೆ ಜೈಲಿನಲ್ಲಿ ಆರೋಪಿಯಾಗಿರುವ ತನ್ನ ಪತಿ ಅಬ್ದುಸ್ಸಲಾಂ ಎಂಬಾತನನ್ನು ಕಾಣಲು ಬಂದಿದ್ದಳು. ತಿಂಡಿಯ ಜತೆ 17 ಗ್ರಾಂ ಗಾಂಜಾವನ್ನು ಇಟ್ಟುಕೊಂಡಿದ್ದು, ಜೈಲಿನ ಸಿಬ್ಬಂದಿ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾಗಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬರ್ಕೆ ಪೊಲೀಸರು ಈಕೆಯನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ಸೆ.9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈತನ ಮೇಲೆ ಪುತ್ತೂರು, ಕುಂದಾಪುರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





