ಅಕ್ರಮ ಮದ್ಯ ನಾಶ

ತರೀಕೆರೆ, ಆ.30: ತಾಲೂಕಿನ ಅಬಕಾರಿ ಇಲಾಖೆಯಲ್ಲಿ 136 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಮದ್ಯವನ್ನು ಚಿಕ್ಕಮಗಳೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಮಹಾದೇವು ಸಮ್ಮುಖದಲ್ಲಿ ಕಚೇರಿಯ ಆವರಣದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ನಾಶಪಡಿಸಲಾಯಿತು.
2013ರಿಂದ 2015ರವರೆಗೆ 2 ವರ್ಷದಲ್ಲಿ 833.960 ಲೀ. ಮದ್ಯ ಹಾಗೂ 38.270 ಲೀ. ಬಿಯರ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮದ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶ ಪಡಿಸಲು ಅಧಿಕಾರಿಗಳು ಕ್ರಮ ಕೈಗೊಂಡರು.
ಈ ಸಂದರ್ಭದಲ್ಲಿ ತಾಲೂಕು ಅಬಕಾರಿ ನಿರೀಕ್ಷಕ ಶಂಕರ್, ಉಪ ನಿರೀಕ್ಷಕ ಕುಮಾರಸ್ವಾಮಿ, ಬಸವರಾಜಪ್ಪ, ಸಿಬ್ಬಂದಿ ಶಿವರುದ್ರಯ್ಯ, ಪಾಟೀಲ್, ಲಕ್ಷ್ಮೀ ಹಾಗೂ ದಿನಗೂಲಿ ನೌಕರರು ಉಪಸ್ಥಿತರಿದ್ದರು.
Next Story





